Basavaraj S Bommai's banner
Basavaraj S Bommai's profile picture

Basavaraj S Bommai

@BSBommai523,325 subscribers

Member of Parliament, Haveri - Gadag Constituency and Former Chief Minister of Karnataka.

Videos

BSBommai's profile picture

ಮಾನ್ಯ ವಕ್ಪ್ ಸಚಿವರಾದ B Z Zameer Ahmed Khan ಅವರು ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ವಕ್ಪ್ ಬೋರ್ಡ್ ಸಭೆ ಮಾಡಿಲ್ಲ. ವಕ್ಪ್ ಬೋರ್ಡ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ Karnataka Congress ನಾಯಕರಿಂದ ವಕ್ಪ್ ಆಸ್ತಿ ವಶಪಡಿಸಿಕೊಳ್ಳಬೇಕೆಂದು ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೊಟೀಸ್ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವೂದೂ ವಿಷಯ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ. ನಾನು ಅಂದು ಹೇಳಿರುವುದು ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿ ನೀಡಿರುವಂತೆ ಕಾಂಗ್ರೆಸ್ ನ್ ಕೆಲವು ದೊಡ್ಡ ನಾಯಕರು ಮೋಸದಿಂದ ಎಷ್ಡೆಷ್ಟು ವಕ್ಪ್ ಆಸ್ತಿ ನುಂಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ನಾವು ರೈತರಿಗೆ ಯಾವುದೇ ನೊಟಿಸ್ ಕೊಟ್ಟಿಲ್ಲ ರೈತರ ಜಮೀನು ವಶ ಪಡೆದುಕೊಂಡಿಲ್ಲ. ಸಚಿವ ಜಮೀರ್ ಅವರು ರೈತರಿಗೆ ನೋಟಿಸ್ ಕೊಡುವ ಮೊದಲು ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ವಕ್ಪ್ ಆಸ್ತಿ ಹಡಪ್ ಮಾಡಿದ್ದಾರೆ‌ ಅದನ್ನು ಕೂಡಲೇ ರಿಕವರಿ ಮಾಡಲಿ. ಮುಖ್ಯಮಂತ್ರಿ Siddaramaiah ಅವರು ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್ ಕೊಡುವುದಿಲ್ಲ ಅನ್ನುವುದು ಏನು ಗ್ಯಾರೆಂಟಿ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ಗೌರವ ಇದ್ದರೆ, ರೈತರ ಆಸ್ತಿ ಉಳಿಸಬೇಕೆಂಬ ಮನಸ್ಸಿದ್ದರೆ ಕೂಡಲೆ ವಕ್ಪ್ ಗೆಜೆಟ್ ನೊಟಿಫಿಕೇಶ್ ರದ್ದು ಮಾಡಬೇಕು.

Basavaraj S Bommai

48,396 görüntüleme • 1 yıl önce

BSBommai's profile picture

ಹಾವೇರಿ‌ ಜಿಲ್ಲೆಗೆ ಸೂಪ‌ರ್ ಸ್ಪೆಷಾಲಿಟಿ ಆಸ್ಪತ್ರೆ ನೀಡದಿರುವುದಕ್ಕೆ ಜಿಲ್ಲೆಯ ಜನತೆಗೆ, ಎಲ್ಲ ಪಕ್ಷದ ನಾಯಕರಿಗೆ ನಿರಾಸೆಯಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾಕೆ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವು. ಆಗ ಸಕಾರಾತ್ಮವಾಗಿ ಸ್ಪಂದನೆ ಮಾಡಿದ್ದರು. ಬಜೆಟ್ ನಲ್ಲಿ ಘೋಷಣೆ ಮಾಡದೇ ಇರುವುದಕ್ಕೆ ನಿರಾಸೆಯಾಗಿದೆ. ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು, ಯುನಿವರ್ಸಿಟಿ, ಇಂಜನೀಯರಿಂಗ್ ಕಾಲೇಜು, ಲಾ ಕಾಲೇಜು ಮಾಡಿದ್ದು ನಮ್ಮ ಸರ್ಕಾರ, ನಮ್ಮ ಜಿಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಏನಾದರೂ ಅನಾಹುತ ಆದರೆ ಬಹಳ ಜನರು ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕು. ಆಗ ಬಹಳಷ್ಟು ಜನ ಜೀವ ಕಳೆದುಕೊಳ್ಳುತ್ತಾರೆ. ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಗಬೇಕೆಂದು ಹೇಳಿದ್ದೇವು. ಅವರದು ಕೇವಲ ಮಾತಿನ ಸಹಾನುಭೂತಿಯಾಗಿದೆ. ಈಗಲೂ ಕೂಡ ಅವರು ಮಾಡಿರುವ ಅನ್ಯಾಯ ಸರಿಪಡಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮತಿ ಕೊಟ್ಟು ಪೂರಕ ಬಜೆಟ್‌ ನಲ್ಲಾದರೂ ಹಣ ಒದಗಿಸಿದರೆ ಕೆಲಸ ಆರಂಭವಾಗುತ್ತದೆ. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಿಸಲಿ ಎಂದು ಆಗ್ರಹಿಸುತ್ತೇನೆ.

Basavaraj S Bommai

10,728 görüntüleme • 4 ay önce