
Janata Dal Secular
@JanataDal_S • 67,474 subscribers
| ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)
Shorts
Videos

ಕನ್ನಡಿಗರ ಹೆಮ್ಮೆಯ HMT ಗತವೈಭವಕ್ಕೆ ಮರುಜೀವ! 🇮🇳⌚ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೆಚ್ಎಂಟಿ ಬಿಡುಗಡೆ ಮಾಡಿರುವ ವಿಶೇಷ ಕೈಗಡಿಯಾರ ಖರೀದಿಸಲು ಬೆಂಗಳೂರಿನ ಜಾಲಹಳ್ಳಿಯಲ್ಲಿ ಶೋರೂಮ್ ಮುಂದೆ 2 ಕಿ.ಮೀಗೂ ಹೆಚ್ಚು ದೂರ ಸಾಲುಗಟ್ಟಿ ನಿಂತು ವಾಚ್ಗಳನ್ನು ಖರೀದಿಸುತ್ತಿರುವುದು #HMT ಮೇಲಿನ ಜನರ ನಂಬಿಕೆ ಮತ್ತು ಅಭಿಮಾನಕ್ಕೆ ಸಾಕ್ಷಿ. ಮಾನ್ಯ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರ ದೂರದೃಷ್ಟಿ ಹಾಗೂ ಅವಿರತ ಪರಿಶ್ರಮದಿಂದಾಗಿ ಹೆಚ್ಎಂಟಿ ಮತ್ತೆ ಜನರ ಮನ ಗೆಲ್ಲುತ್ತಿದೆ. ಈ ಐತಿಹಾಸಿಕ ಸಂಸ್ಥೆಯು ಪುನರುಜ್ಜೀವನದತ್ತ ಹೆಜ್ಜೆ ಇಡುತ್ತಿರುವುದು ಶ್ಲಾಘನೀಯ. ಕನ್ನಡಿಗರ ಹೆಮ್ಮೆ, ದೇಶದ ಗರಿಮೆಯಾದ ನಮ್ಮ #HMT ಸಂಸ್ಥೆಯನ್ನು ನಾವೆಲ್ಲರೂ ಒಟ್ಟಾಗಿ ಪ್ರೋತ್ಸಾಹಿಸೋಣ. #HMTWatches #HMTRevival #VocalForLocal #MakeInIndia #HDKumaraswamy #AtmanirbharBharat
Janata Dal Secular75,612 просмотров • 3 дней назад

" Karnataka Congress ದುರಾಡಳಿತದಲ್ಲಿ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ ಜೋರಾಗಿದೆ. ಸಚಿವ B Z Zameer Ahmed Khan ಪುತ್ರ ಝೈದ್ ಖಾನ್ ಸಿನಿಮಾದ ಪ್ಲೆಕ್ಸ್ʼಗಳನ್ನು ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಶಿಡ್ಲಘಟ್ಟದ ಕೋಟೆ ಸರ್ಕಲ್ ರಸ್ತೆಗಳಲ್ಲಿ ಅನುಮತಿ ಪಡೆಯದೆ, ಅಕ್ರಮವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದ್ದಕ್ಕೆ, ಪೌರಾಯುಕ್ತೆ ಅಮೃತಗೌಡ ಅವರು, ರಸ್ತೆಯಲ್ಲಿ ಅಪಘಾತ ಹೆಚ್ಚಿದ್ದು, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬ್ಯಾನರ್ಗಳನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡ ದೂರವಾಣಿ ಕರೆ ಮಾಡಿ, ಬ್ಯಾನರ್ ತೆಗೆಸಿದವರನ್ನು ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ಕಾರ್ಯಕರ್ತರನ್ನು ಕರೆಸಿ ದಂಗೆ ಎಬ್ಬಿಸುತ್ತೇನೆ ಎಂದು ಮಹಿಳಾಧಿಕಾರಿಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದಾನೆ. ಸಿಎಂ Siddaramaiah , ಗೃಹ ಸಚಿವರ Dr. G Parameshwara ಅವರೇ ಪೌರಾಯುಕ್ತೆಗೆ ಧಮ್ಕಿ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಗೂಂಡಾ ರಾಜೀವ್ ಗೌಡನನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಜರುಗಿಸಿ. ಕಾಂಗ್ರೆಸ್ ಅಧ್ಯಕ್ಷ DK Shivakumar ಅವರೇ, #KPCC ರಾಜ್ಯ ಸಂಯೋಜಕನಾಗಿರುವ ಬೀದಿ ರೌಡಿ ರಾಜೀವ್ ಗೌಡನನ್ನು ಮೊದಲು ಪಕ್ಷದಿಂದ ವಜಾ ಮಾಡಿ. #CongressRowdyism #ಕಾಂಗ್ರೆಸ್_ಗೂಂಡಾಗಿರಿ
Janata Dal Secular153,029 просмотров • 7 месяцев назад

ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ H D Devegowda ಅವರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರ ಮಾತೃಶ್ರೀ ಶ್ರೀಮತಿ ಚೆನ್ನಮ್ಮ ಅವರು ಆರೋಗ್ಯ ಸಮಸ್ಯೆಯಿಂದಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಅವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂಬ ದೃಢ ವಿಶ್ವಾಸ ನಮಗಿದೆ. ತಾಯಿಯವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆ ರಾಜರಾಜೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇವೆ.
Janata Dal Secular10,484 просмотров • 1 месяц назад

ಇದು ಸರ್ಕಾರದ ಸಮೀಕ್ಷೆಯೋ ಅಥವಾ ಕಾಂಗ್ರೆಸ್ ಪಕ್ಷದ ಪ್ರಚಾರವೋ ? ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆಯಲ್ಲಿ ಬಿಎಲ್ಒ (BLO) ಅಧಿಕಾರಿ ಮತದಾರರ ಮಾಹಿತಿ ಪಡೆಯಲು ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಅವರ ಭಾವಚಿತ್ರ ಹಾಗೂ ಕಾಂಗ್ರೆಸ್ ಪಕ್ಷದ ಚಿಹ್ನೆಯಿರುವ ಬುಕ್ ಬಳಸುತ್ತಿರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ. ಸರ್ಕಾರಿ ವ್ಯವಸ್ಥೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಂಡು ಮತದಾರರ ದಾರಿ ತಪ್ಪಿಸುತ್ತಿರುವ ಈ ಕೃತ್ಯದ ಹಿಂದೆ ಯಾರಿದ್ದಾರೆ ? Chief Electoral Officer, Karnataka ಅವರು ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು. Election Commission of India #SIR #VoterListRevision #ElectionCommission
Janata Dal Secular13,648 просмотров • 1 месяц назад

ಡಿಸಿಎಂ DK Shivakumar ಅವರೇ, ಅಂದು ಈ ಅವಿವೇಕಿಯೇ ಅಲ್ಲವೇ ಬೆಂಗಳೂರಿನ ಮರ್ಯಾದೆ ತೆಗೆದಿದ್ದು ! ಅಧಿಕಾರಕ್ಕೆ ಬರುವ ಮುಂಚೆ ಒಂದು ನಾಟಕ, ಅಧಿಕಾರಕ್ಕೆ ಬಂದಾಗ ಬೃಹನ್ ನಾಟಕ ! ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಾಜಧಾನಿಯನ್ನು ಅಧೋಗತಿಗೆ ತಂದಿರುವ ಪರ್ಸೆಂಟೇಜ್ ಮಂತ್ರಿಗಳೇ, ನಿಮ್ಮ ಹೊಣೆಗೇಡಿತನಕ್ಕೆ ವಿರೋಧ ಪಕ್ಷಗಳನ್ನು ಟೀಕಿಸುವ ಭರದಲ್ಲಿ Karnataka Congress ನಾಯಕರು ಬೆಂಗಳೂರಿನ ಘನತೆಗೆ ಕಳಂಕ ತರಬೇಡಿ. #BengaluruRainEffect
Janata Dal Secular82,811 просмотров • 1 год назад

,Siddaramaiah ನಿಮಗೆ ಅಧಿಕಾರದ ದರ್ಪ ತಲೆಗೇರಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೊಡೆಯಲು ಕೈ ಎತ್ತುವುದು ನಿಮ್ಮ ಸ್ಥಾನಕ್ಕೆ, ಘನತೆಗೆ ಕಿಂಚಿತ್ತೂ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿರುವ ನೀವು, ಬೀದಿ ರೌಡಿಯಂತೆ ಸಾರ್ವಜನಿಕ ವೇದಿಕೆಯಲ್ಲಿಯೇ ಏಕವಚನ ಪ್ರಯೋಗಿಸಿ, ಎಸ್ಪಿ (SP)ಗೆ ಹೊಡೆಯಲು ಯತ್ನಿಸಿದ್ದು ಅಕ್ಷಮ್ಯ ಅಪರಾಧ. ನಿಮ್ಮ ಅಧಿಕಾರದ ಅವಧಿ ಕೇವಲ 5 ವರ್ಷ. ಆದರೆ ಸರ್ಕಾರಿ ಅಧಿಕಾರಿ 60 ವರ್ಷ ವಯಸ್ಸಿನವರೆಗೂ ಸೇವೆ ಸಲ್ಲಿಸುತ್ತಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಿಮ್ಮ ದುರ್ವರ್ತನೆ ಸರಿಪಡಿಸಿಕೊಳ್ಳಿ. Karnataka Congress
Janata Dal Secular59,276 просмотров • 1 год назад

ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಕನ್ನಡಿಗರ ಗಟ್ಟಿಧ್ವನಿಯಾಗಿ, ಕಳೆದ 25 ವರ್ಷಗಳಿಂದ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ. ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ಸ್ಥಾಪಕರಾದ ಪೂಜ್ಯ ಶ್ರೀ ಹೆಚ್.ಡಿ. ದೇವೇಗೌಡರವರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವದಿಂದ, ಪ್ರಾದೇಶಿಕ ಪಕ್ಷವೊಂದು 25 ವರ್ಷ ಪೂರೈಸಲು ಕಾರಣೀಭೂತವಾಗಿದೆ. ನಮ್ಮ ನಿಷ್ಠಾವಂತ ಕಾರ್ಯಕರ್ತರು ಹಗಲಿರುಳೆನ್ನದೆ ನಾಯಕರ ಹೆಗಲಿಗೆ ಹೆಗಲು ಕೊಟ್ಟು ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ನಮ್ಮ ಪಕ್ಷವು ಅನೇಕ ಸವಾಲುಗಳನ್ನು ಎದುರಿಸಿ, ಅನೇಕ ರಾಜಕೀಯ ಕುತಂತ್ರಗಳನ್ನು ಮೆಟ್ಟಿ ನಿಂತು, ಇವತ್ತು ಬಲಿಷ್ಠ ಪ್ರಾದೇಶಿಕ ಪಕ್ಷವಾಗಿ ಬೆಳೆದಿದೆ. #ಜೆಡಿಎಸ್ #ಬೆಳ್ಳಿಹಬ್ಬ #JDS #25years #SilverJubilee #SilverJubileeCelebration
Janata Dal Secular37,746 просмотров • 8 месяцев назад

ಮಿಸ್ಟರ್ “ಗೊತ್ತಿಲ್ಲ” ಗೃಹ ಸಚಿವ Dr. G Parameshwara ಅವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ಹೆಚ್ಚುತ್ತಿರುವ ಇಂತಹ ಘಟನೆಗಳೇ ಸಾಕ್ಷಿ. ಕಾನೂನು, ಪೊಲೀಸರ ಭಯವಿಲ್ಲದೆ, ಬೀದಿ ಬೀದಿಯಲ್ಲಿ ರೌಡಿಗಳು, ಪುಂಡರು ಲಾಂಗು, ಮಚ್ಚು ಹಿಡಿದು ರಾಜಾರೋಷವಾಗಿ ಓಡಾಡುವ ಮಟ್ಟಕ್ಕೆ ಪೊಲೀಸ್ ಇಲಾಖೆಯನ್ನು ನಿಷ್ಕ್ರಿಯ ಮಾಡಿರುವ Karnataka Congress ಸರ್ಕಾರದ ಆಡಳಿತಕ್ಕೆ ನಾಚಿಕೆಯಾಗಬೇಕು! ಕಾಂಗ್ರೆಸ್ ದುರಾಡಳಿತದಲ್ಲಿ ಗೃಹ ಇಲಾಖೆಯ ವೈಫಲ್ಯ ಹಾಗೂ ನಿಮ್ಮ ಅಸಮರ್ಥತೆಯಿಂದ ರಾಜ್ಯದ ಜನರಿಗೆ ಸುರಕ್ಷತೆಯ ಭಯ ಇನ್ನಿಲ್ಲದೆ ಕಾಡುತ್ತಿರುವುದಂತು ಸತ್ಯ. CM of Karnataka DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice #CongressFailsKarnataka
Janata Dal Secular21,249 просмотров • 4 месяцев назад

ಶೋಕಿಲಾಲಾ, ರೀಲ್ಸ್ ರಾಜಾ ಮಿಸ್ಟರ್ ಡಿಸಿಎಂ DK Shivakumar ಹೆಬ್ಬಾಳ ಫ್ಲೈಓವರ್ ಮೇಲೆ ಚಾಲನೆ ಮಾಡಿದ ದ್ವಿಚಕ್ರವಾಹನ ( KA 04 JZ 2087 ) 34ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೆ. ದಂಡದ ಮೊತ್ತ 18,500 ರೂ. ಬಾಕಿ ಇದೆ. ಪ್ರಚಾರಕ್ಕಾಗಿ ಫೋಟೋ ಶೂಟ್ , ರೀಲ್ಸ್ ಶೋಕಿ ಬಿಟ್ಟು ಮೊದಲು ಸಚಿವ ಸ್ಥಾನದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ. Hebbal Traffic Police Station ಅವರೇ, ದ್ವಿಚಕ್ರವಾಹನ ( KA 04 JZ 2087 ) ದ ದಂಡವನ್ನು ವಸೂಲಿಮಾಡುವ ಕೆಲಸ ಆಗಲಿ.
Janata Dal Secular47,229 просмотров • 1 год назад

ಭೂಗತ ಪಾತಕಿ ಕೊತ್ವಾಲ್ ಶಿಷ್ಯನ ಬ್ಲ್ಯೂ ಫಿಲ್ಮ್ ಪುರಾಣ ಅಂದಿನ ಡಿಕೆ ಶಿವಕುಮಾರ ಇಂದಿನ ಡಿಸಿಎಂ DK Shivakumar Karnataka Congress
Janata Dal Secular30,922 просмотров • 7 месяцев назад

CDಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್!! 1.ಡಿಸಿಎಂ ಡಿ.ಕೆ.ಶಿವಕುಮಾರ್ 2.ಕೃಷಿ ಸಚಿವ ಚೆಲುವರಾಯಸ್ವಾಮಿ 3.ಕಂದಾಯ ಸಚಿವ ಕೃಷ್ಣಭೈರೇಗೌಡ 4. IT BT ಸಚಿವ ಪ್ರಿಯಾಂಕ್ ಖರ್ಗೆ + ಇನ್ನೂ ಒಬ್ಬ ಸಚಿವ + ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ •ಇವರೆಲ್ಲರೂ ಹೂಡಿರುವ ಸಂಚು ಏನ್ ಗೊತ್ತಾ? ಪ್ರಧಾನಿಗಳಾದ ಮಾನ್ಯ ಶ್ರೀ Narendra Modi ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರಿಗೆ ಕೆಟ್ಟ ಹೆಸರು ತರುವುದು. ಈ ಸಂಚು ಸಾಕಾರಗೊಳಿಸಲು CDಶಿವಕುಮಾರ್ ಸಾಹೇಬರು ವಕೀಲರಾದ ಶ್ರೀ ದೇವರಾಜೇಗೌಡರಿಗೆ ಆಫರ್ ಮಾಡಿದ ಮೊತ್ತ ಬರೋಬ್ಬರಿ ₹100 ಕೋಟಿ!! #CDಶಿವಕುಮಾರ್ #ಪೆನ್_ಡ್ರೈವ್_ಗ್ಯಾಂಗ್ #Shivakumar_Investigation_Team
Janata Dal Secular84,118 просмотров • 2 лет назад

ಕರ್ನಾಟಕದಲ್ಲಿ ವ್ಯಾಪಾರ ಮಾಡಿ ಲಾಭಗಳಿಸುವ ಇವರಿಗೆ ಎಷ್ಟು ಸೊಕ್ಕು ? ಕನ್ನಡ, ಕನ್ನಡಿಗರನ್ನು ಅವಹೇಳನ ಮಾಡುವ ಕನ್ನಡದ್ರೋಹಿ ಉದ್ದಿಮೆದಾರರನ್ನು ಕರ್ನಾಟಕದಲ್ಲಿ ವ್ಯವಹಾರ ಮಾಡಲು ಬಿಡಬಾರದು. ಅನ್ಯ ರಾಜ್ಯದಿಂದ ವಲಸೆ ಬಂದು ಕನ್ನಡದ ಅನ್ನ ತಿನ್ನುತ್ತಾ, ಕನ್ನಡದ ನೀರು ಕುಡಿಯುತ್ತಾ, ಕನ್ನಡಿಗರನ್ನೇ ಅವಮಾನಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. Karnataka Congress ಸರ್ಕಾರ ಇಂತಹ ಕನ್ನಡ ವಿರೋಧಿಗಳನ್ನು ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಗಡಿಪಾರು ಮಾಡಬೇಕಾಗಿ Janata Dal Secular ಪಕ್ಷವು ಆಗ್ರಹಿಸುತ್ತದೆ.
Janata Dal Secular51,518 просмотров • 1 год назад