Vijayendra Yediyurappa's banner
Vijayendra Yediyurappa's profile picture

Vijayendra Yediyurappa

@BYVijayendra141,140 subscribers

State President @BJP4Karnataka | MLA, Shikaripura Assembly Constituency, Karnataka

Shorts

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿ ದೈಹಿಕ ಹಲ್ಲೆಗೂ ಮುಂದಾಗುತ್ತಿದ್ದಾರೆ. ಚಿತ್ರದುರ್ಗದಲ್ಲಿ ನಮ್ಮ ಪಕ್ಷದ ಮಧುಗಿರಿ (ಸಂಘಟನಾತ್ಮಕ ಜಿಲ್ಲೆ) ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ ಅವರ ಮೇಲೆ ಪಿಎಸ್​ಐ ಗಾದಿಲಿಂಗಪ್ಪ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಇದನ್ನು BJP Karnataka ಅತ್ಯುಗ್ರವಾಗಿ ಖಂಡಿಸುತ್ತದೆ. ನಾಗರಿಕ ಸಮಾಜದಲ್ಲಿ ಶಾಂತಿ ಸಂರಕ್ಷಿಸಲಾಗದ ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ತಮ್ಮ ಪೊಲೀಸ್ ರೌದ್ರಾವತಾರ ಪ್ರದರ್ಶಿಸಲು ಹೊರಟಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಮುನ್ನ ಅವರ ಸಾಮಾಜಿಕ ಸ್ಥಾನಮಾನವನ್ನೂ ಲೆಕ್ಕಿಸದೆ ಗೂಂಡಾಗಿರಿ ಪ್ರದರ್ಶಿಸುವುದು ಪೋಲಿಸ್ ಇಲಾಖೆಯ ದಕ್ಷತೆಯ ಘನತೆಯನ್ನು ಕಳೆದಂತೆ. ಕಾಂಗ್ರೆಸ್ ಪ್ರಭಾವಿಗಳಿಂದ ಆಯಾ ಕಟ್ಟಿನ ಸ್ಥಾನದಲ್ಲಿ ಕುಳಿತುಕೊಂಡಿರುವ ಕೆಲವು ಪೊಲೀಸ್ ಅಧಿಕಾರಿಗಳು ತಮಗೆ ಯಾರೂ ಏನೂ ಮಾಡಲಾಗದು ಎಂಬ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿದ್ದು ಎಲ್ಲೆಂದರಲ್ಲಿ ತಮ್ಮ ದರ್ಪ ಪ್ರದರ್ಶಿಸುತ್ತಿದ್ದಾರೆ. ಚಿತ್ರದುರ್ಗದ ಘಟನೆಯ ಹಿಂದೆ ರಾಜಕಾರಣದ ಪ್ರಚೋದನೆ ಇರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ಅಧಿಕಾರಸ್ತ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸರು ಇಲಾಖೆಯ ಗೌರವ ಕಳೆಯುತ್ತಿದ್ದಾರೆ. ಚಿತ್ರದುರ್ಗದ ಪಿಎಸ್ಐ ಗಾದಿಲಿಂಗಪ್ಪ ಅವರನ್ನು ಈ ಕೂಡಲೇ ಪೊಲೀಸ್ ಮಹಾನಿರ್ದೇಶಕರು ಅಮಾನತ್ತಿನಲ್ಲಿಡದಿದ್ದರೆ ಬಿಜೆಪಿಯು ನಾಗರಿಕರೊಡಗೂಡಿ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸುತ್ತೇನೆ. #CongressFailsKarnataka

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿ ದೈಹಿಕ ಹಲ್ಲೆಗೂ ಮುಂದಾಗುತ್ತಿದ್ದಾರೆ. ಚಿತ್ರದುರ್ಗದಲ್ಲಿ ನಮ್ಮ ಪಕ್ಷದ ಮಧುಗಿರಿ (ಸಂಘಟನಾತ್ಮಕ ಜಿಲ್ಲೆ) ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ ಅವರ ಮೇಲೆ ಪಿಎಸ್​ಐ ಗಾದಿಲಿಂಗಪ್ಪ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಇದನ್ನು BJP Karnataka ಅತ್ಯುಗ್ರವಾಗಿ ಖಂಡಿಸುತ್ತದೆ. ನಾಗರಿಕ ಸಮಾಜದಲ್ಲಿ ಶಾಂತಿ ಸಂರಕ್ಷಿಸಲಾಗದ ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ತಮ್ಮ ಪೊಲೀಸ್ ರೌದ್ರಾವತಾರ ಪ್ರದರ್ಶಿಸಲು ಹೊರಟಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಮುನ್ನ ಅವರ ಸಾಮಾಜಿಕ ಸ್ಥಾನಮಾನವನ್ನೂ ಲೆಕ್ಕಿಸದೆ ಗೂಂಡಾಗಿರಿ ಪ್ರದರ್ಶಿಸುವುದು ಪೋಲಿಸ್ ಇಲಾಖೆಯ ದಕ್ಷತೆಯ ಘನತೆಯನ್ನು ಕಳೆದಂತೆ. ಕಾಂಗ್ರೆಸ್ ಪ್ರಭಾವಿಗಳಿಂದ ಆಯಾ ಕಟ್ಟಿನ ಸ್ಥಾನದಲ್ಲಿ ಕುಳಿತುಕೊಂಡಿರುವ ಕೆಲವು ಪೊಲೀಸ್ ಅಧಿಕಾರಿಗಳು ತಮಗೆ ಯಾರೂ ಏನೂ ಮಾಡಲಾಗದು ಎಂಬ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿದ್ದು ಎಲ್ಲೆಂದರಲ್ಲಿ ತಮ್ಮ ದರ್ಪ ಪ್ರದರ್ಶಿಸುತ್ತಿದ್ದಾರೆ. ಚಿತ್ರದುರ್ಗದ ಘಟನೆಯ ಹಿಂದೆ ರಾಜಕಾರಣದ ಪ್ರಚೋದನೆ ಇರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ಅಧಿಕಾರಸ್ತ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸರು ಇಲಾಖೆಯ ಗೌರವ ಕಳೆಯುತ್ತಿದ್ದಾರೆ. ಚಿತ್ರದುರ್ಗದ ಪಿಎಸ್ಐ ಗಾದಿಲಿಂಗಪ್ಪ ಅವರನ್ನು ಈ ಕೂಡಲೇ ಪೊಲೀಸ್ ಮಹಾನಿರ್ದೇಶಕರು ಅಮಾನತ್ತಿನಲ್ಲಿಡದಿದ್ದರೆ ಬಿಜೆಪಿಯು ನಾಗರಿಕರೊಡಗೂಡಿ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸುತ್ತೇನೆ. #CongressFailsKarnataka

15,023 Aufrufe

Law and order in Karnataka has become a thing of the past since Congress took over the state. Appeasement politics is on the rise, giving radicals a free rein to pelt stones at police stations, burn them down, attack police personnel, and ransack police vehicles. Despite these incidents, the CM of Karnataka comes out blaming the police personnel. Can appeasement get any worse? Karnataka, once an hub of investors, is now a safe haven for terrorists, drug addicts, and the corrupts. While the state is in such disarray, the government seems more concerned about who writes what on Twitter and sends police to arrest those civilians. No action was taken against those who pelted stones at the police station and police personnel, but the police force was sent to arrest Harish Poonja ಹರೀಶ್ ಪೂಂಜ for being the voice of BJP karyakarthas.

Law and order in Karnataka has become a thing of the past since Congress took over the state. Appeasement politics is on the rise, giving radicals a free rein to pelt stones at police stations, burn them down, attack police personnel, and ransack police vehicles. Despite these incidents, the CM of Karnataka comes out blaming the police personnel. Can appeasement get any worse? Karnataka, once an hub of investors, is now a safe haven for terrorists, drug addicts, and the corrupts. While the state is in such disarray, the government seems more concerned about who writes what on Twitter and sends police to arrest those civilians. No action was taken against those who pelted stones at the police station and police personnel, but the police force was sent to arrest Harish Poonja ಹರೀಶ್ ಪೂಂಜ for being the voice of BJP karyakarthas.

14,145 Aufrufe

Videos

BYVijayendra's profile picture

ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕನಿಷ್ಠ ಪಕ್ಷ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾತ್ರಿಯಾದರೆ ಪುಂಡರು, ಕಿಡಿಗೇಡಿಗಳು ನಡು ರಸ್ತೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವುದು ದಿನೇ ದಿನೇ ವರದಿಯಾಗುತ್ತಲೇ ಇವೆ. ತಡರಾತ್ರಿ ಕಾಡುಬೀಸನಹಳ್ಳಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಪುಂಡನೊಬ್ಬ ಬೆದರಿಸುತ್ತಿರುವ ಘಟನೆ ಉದ್ಯೋಗಿಗಳು, ಮಹಿಳೆಯರು, ನಾಗರೀಕರು ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ಓಡಾಡಲೂ ಭಯ ಪಡುವ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳಿತಪ್ಪಿರುವುದಕ್ಕೆ ಸಾಕ್ಷಿಯಾಗಿ ಸಂಭವಿಸಿರುವ ಅನೇಕ ದುರ್ಘಟನೆಗಳು ನಮ್ಮ ಮುಂದಿವೆ, ಅಭಿವೃದ್ಧಿಯತ್ತ ಒಂದೇ ಒಂದು ಹೆಜ್ಜೆ ಇಡದ ಭ್ರಷ್ಟ ಹಗರಣಗಳ ಸರಮಾಲೆ ಹೊತ್ತ ರಾಜ್ಯ Karnataka Congress ಸರ್ಕಾರ ಕಾನೂನು ಸುವ್ಯವಸ್ಥೆಯ ವಿಷಯದಲ್ಲಾದರೂ ಜನರಿಗೆ ನೆಮ್ಮದಿ ಕೊಡುವ ಪ್ರಮಾಣಿಕ ಪ್ರಯತ್ನ ಮಾಡಲಿ. #CongressFailsKarnataka

Vijayendra Yediyurappa

72,614 Aufrufe • vor 1 Jahr

BYVijayendra's profile picture

‘ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ’, ಹಾಗೆಯೆ ಈ Karnataka Congress ಸರ್ಕಾರ ನಮ್ಮ ಯುವಜನತೆಯ ಆಕ್ರೋಶಕ್ಕೆ ಕನಿಷ್ಠ ಸಂವೇದನೆಯನ್ನೂ ವ್ಯಕ್ತಪಡಿಸದೆ, 1000 ದಿನಗಳ ಸಂಭ್ರಮಾಚರಣೆ, ಕುರ್ಚಿ ಕಾಳಗ, ಹೀಗೆ ತನ್ನ ಅಧಿಕಾರದಾಹದಲ್ಲಿ ಮುಳುಗಿದೆ. ಮಾತೆತ್ತಿದರೆ 'ಗ್ಯಾರಂಟಿ' ಜಪ ಮಾಡುವವರಿಗೆ, ವಯೋಮಿತಿ ಮೀರುತ್ತಿರುವ ಗ್ರಾಮೀಣ ಭಾಗದ ನಮ್ಮ ಪ್ರತಿಭಾವಂತ ಯುವಕ ಯುವತಿಯರ ಆಕ್ರೋಶ ಕೇಳಿಸುತ್ತಿಲ್ಲವೇ? ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ, ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಯುವಜನರ ಭವಿಷ್ಯದ ಜೊತೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದು ಕರ್ನಾಟಕದ ಶಕ್ತಿಯಾಗಿರುವ ಯುವಪೀಳಿಗೆಗೆ ಈ ಸರ್ಕಾರ ಮಾಡುತ್ತಿರುವ ದ್ರೋಹ. ನಮ್ಮ ಯುವಶಕ್ತಿಯ ಕನಸುಗಳು ಸರ್ಕಾರದ ಭ್ರಷ್ಟಾಚಾರ ಮತ್ತು ಉದಾಸೀನತೆಗೆ ಬಲಿಯಾಗುವುದನ್ನು BJP Karnataka ಸಹಿಸುವುದಿಲ್ಲ. ಶಾಂತಿಯುತವಾಗಿ ಹಕ್ಕು ಕೇಳುತ್ತಿರುವ ವಿದ್ಯಾರ್ಥಿಗಳ ಮೇಲೆ ಪೋಲೀಸ್ ಬಲ ಪ್ರಯೋಗ ಮಾಡುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಕೂಡಲೇ ರಾಜ್ಯ ಸರ್ಕಾರ ತನ್ನ ಸ್ವಾರ್ಥ ಮತ್ತು ಗೊಂದಲಗಳನ್ನು ಬದಿಗಿಟ್ಟು, ಸ್ಥಗಿತಗೊಂಡಿರುವ ಎಲ್ಲಾ ನೇಮಕಾತಿಗಳಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸುತ್ತೇನೆ. ಈ ನ್ಯಾಯಸಮ್ಮತ ಬೇಡಿಕೆಗಳಿಗೆ ಈ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಧಾರವಾಡದ ಕಿಚ್ಚು ರಾಜ್ಯಾದ್ಯಂತ ಹರಡಲಿದೆ, ರಾಜ್ಯದ ಪ್ರತಿಯೊಬ್ಬ ನಿರುದ್ಯೋಗಿ ಯುವಕ ಯುವತಿಯರ ಪರವಾಗಿ ಬಿಜೆಪಿ ಸದಾ ನಿಲ್ಲಲಿದೆ! #BJP4Youth #YouthAgainstCongress #CongressFailsKarnataka

Vijayendra Yediyurappa

18,363 Aufrufe • vor 4 Monaten

BYVijayendra's profile picture

ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿರುವ ಈ Karnataka Congress ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ಕಾಂಗ್ರೆಸ್ ಮುಖಂಡರುಗಳು ಇದಕ್ಕೆ ತಕ್ಕಂತೆ ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಿಯಮಬಾಹಿರವಾಗಿ ಕೃತ್ಯ ಎಸಗಿರುವುದು ಮಾತ್ರವಲ್ಲದೆ ಒಬ್ಬ ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಮೇಲೆ ಹೀಗೆ ಅಸಭ್ಯ ಪುಂಡನಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಮಾನ್ಯ ಮುಖ್ಯಮಂತ್ರಿ ಶ್ರೀ Siddaramaiah ಅವರೇ, ನಿಮ್ಮದೇ ಪಕ್ಷದ ಈ ಮುಖಂಡನ ಈ 'ಗೂಂಡಾ ವರ್ತನೆ'ಗೂ ಕೂಡ ಬಳ್ಳಾರಿಯ ಪ್ರಕರಣದಲ್ಲಿ ವಹಿಸಿದಂತೆ ಇದಕ್ಕೂ ನಿಮ್ಮ 'ಮೌನ' ಸಮ್ಮತಿ ಇದೆಯೇ? ಅಥವಾ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುತ್ತೀರಾ? ಮಾನ್ಯ ಗೃಹ ಸಚಿವ Dr. G Parameshwara ರವರನ್ನಂತೂ ಕೇಳುವಂತೆಯೇ ಇಲ್ಲ. ಅವರ ಬಳಿ ಮಾಹಿತಿ ಇರುವುದೇ ಇಲ್ಲ. ಪೊಲೀಸ್ ಇಲಾಖೆಯ ಕೈಕಟ್ಟಿ ಹಾಕಿ, ಗೂಂಡಾಗಳಿಗೆ ರಕ್ಷಣೆ ನೀಡುತ್ತಿರುವುದೇ ನಿಮ್ಮ ಸಾಧನೆಯೇ? ಅಧಿಕಾರ ಮದದಿಂದ ಜನಸಾಮಾನ್ಯರ, ಪ್ರಾಮಾಣಿಕ ಅಧಿಕಾರಿಗಳ ಮೇಲೆ ದರ್ಪ ತೋರಿಸುವುದನ್ನು ನೋಡಿಕೊಂಡು ಪಕ್ಷ ಸುಮ್ಮನಿರಲಾಗದು. ಒಬ್ಬ ಮಹಿಳಾ ಅಧಿಕಾರಿ ವಿರುದ್ಧ ದಬ್ಬಾಳಿಕೆ ನಡೆಸುವ ಇಂತಹ ಅಶಿಸ್ತಿನ ನಾಯಕರ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರೇ ರಸ್ತೆಗಿಳಿದು ತಕ್ಕ ಪಾಠ ಕಲಿಸಲಿದ್ದಾರೆ. #GoondaCongress #CongressFailsKarnataka

Vijayendra Yediyurappa

18,202 Aufrufe • vor 5 Monaten

BYVijayendra's profile picture

ಮಾನ್ಯ Dr. Ravi C. T 🇮🇳 ಡಾ. ರವಿ ಸಿ. ಟಿ ಅವರು ಹಿರಿಯ ಶಾಸಕರಾಗಿ ಸುದೀರ್ಘ ಅನುಭವ ಹೊಂದಿದ ಸುಸಂಸ್ಕೃತ ಭಾಷೆ ಬಳಸುವ ಉತ್ತಮ ವಾಕ್ಪಟು. ಸಭ್ಯತೆಯ ಎಲ್ಲೆಮೀರಿ ಪದ ಸಂಸ್ಕೃತಿ ಇಲ್ಲದವರಂತೆ ಮಾತನಾಡಿದವರಲ್ಲ. ಇಂದು ವಿಧಾನಪರಿಷತ್ತಿನಲ್ಲಿ ನಡೆದಿರುವ ಘಟನೆಯ ವೇಳೆ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತ ಪದಬಳಕೆಯ ಸಂಬಂಧ ಈಗಾಗಲೇ ಸೂಕ್ತ ಸ್ಪಷ್ಟನೆ ನೀಡಿ ಆರೋಪ ನಿರಾಕರಿಸಿದ್ದಾರೆ. ಮಾತೆಯನ್ನು ಪೂಜಿಸುವ ಸಂಸ್ಕಾರದ ನೆಲೆಗಟ್ಟಿನ ಸಂಘಟನೆಯಿಂದ ಬೆಳೆದು ಬಂದಿರುವ ಸಿಟಿ ರವಿ ಅವರನ್ನು ಕುರಿತು ಕಾಂಗ್ರೆಸ್ಸಿಗರು ವಿಧಾನಪರಿಷತ್ತಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಬಳಸಿರುವ 'ಕೊಲೆಗಡುಕ' ಎಂಬ ಪದ ಸಹಜವಾಗಿಯೇ ಅವರ ಸಹನೆಯನ್ನು ಕೆಣಕಿರಬಹುದು. ಯಾವುದಾದರೂ ಒಂದು ವಿಷಯವನ್ನು ಸೃಷ್ಟಿಸಿ ಗದ್ದಲವೆಬ್ಬಿಸಿ ತಮಗೆ ಸುತ್ತಿಕೊಂಡಿರುವ ಅಭಿವೃದ್ಧಿ ವಿರೋಧಿ ಆಡಳಿತದ ಅಲೆಯ ವಿರುದ್ಧದ ಹಾಗೂ ಭ್ರಷ್ಟಾಚಾರದ ಹಗರಣಗಳ ಸುರುಳಿಯ ವಿಷಯವನ್ನು ಜನಮಾನಸದ ದಿಕ್ಕು ತಪ್ಪಿಸಲು ಅನಗತ್ಯ ಗೊಂದಲ ಸೃಷ್ಟಿಸುವ ಹೊಸ ವರಸೆಯನ್ನು ಕಾಂಗ್ರೆಸ್ಸಿಗರು ಶುರುವಿಟ್ಟುಕೊಂಡಿದ್ದಾರೆ. ಇಂದಿನ ಘಟನೆಯ ಹಿನ್ನೆಲೆಯಲ್ಲಿ ವಿಧಾನಮಂಡಲದೊಳಗೆ ಸಿ.ಟಿ. ರವಿ ಅವರ ಮೇಲೆ ಮಾರ್ಷಲ್ ಗಳ ಸಮ್ಮುಖದಲ್ಲೇ ಗೂಂಡಾಗಳಿಂದ ಹಲ್ಲೆಗೆ ಯತ್ನ ನಡೆದಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ. ಗೂಂಡಾಗಿರಿ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್ಸಿಗರು ವಿಧಾನಮಂಡಲದೊಳಗೂ ಕೂಡ ಗೂಂಡಾಗಳನ್ನು ಕರೆತಂದು ದಾಂಧಲೆ ಎಬ್ಬಿಸುವ ಮಟ್ಟಿಗೆ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ ಎಂದರೆ ಇನ್ನು ಜನಸಾಮಾನ್ಯರ ಪಾಡೇನು ಎಂಬ ಆತಂಕ ರಾಜ್ಯದ ಜನತೆಯನ್ನು ಕಾಡದೇ ಇರದು. ಪೊಲೀಸ್ ಸರ್ಪಗಾವಲಿನ ಸುವರ್ಣಸೌಧದೊಳಗೆ ಗೂಂಡಾಗಿರಿ ನಡೆಸಲು ಮಾನ್ಯ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಪ್ರಚೋದನೆ ನೀಡಿರುವ ಹಿಂದಿನ ಶಕ್ತಿ ಯಾವುದು ಎಂಬುದರ ಬಗ್ಗೆ ಉಭಯ ಸದನಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಗೂಂಡಾಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ BJP Karnataka ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ.

Vijayendra Yediyurappa

33,739 Aufrufe • vor 1 Jahr

BYVijayendra's profile picture

CKR-45 - ಬೆಸುಗೆಯ ಬಂಧ ಪೂಜ್ಯ ತಂದೆ ಬಿ. ಎಸ್. ಯಡಿಯೂರಪ್ಪನವರು ಅತ್ಯಂತ ಪ್ರೀತಿಯಿಂದ ಕೊಂಡುಕೊಂಡ ಮೊದಲ ವಾಹನ CKR 45 ಅಂಬಾಸಿಡರ್ ಕಾರಿನಲ್ಲಿ ಇಂದು ಕ್ಷೇತ್ರದ ಪ್ರಮುಖರೊಂದಿಗೆ ಕುಳಿತು ಶಿಕಾರಿಪುರದ ಕ್ಷೇತ್ರ ಪ್ರವಾಸ ಕೈಗೊಂಡ ಸಂದರ್ಭ ಭಾವುಕತೆಯ ರೋಮಾಂಚನ ಉಂಟುಮಾಡಿತು. ಏಕೆಂದರೆ ಈ ಕಾರು ತಂದೆಯವರ ರಾಜಕೀಯ ಜೀವನದಲ್ಲಿ ಭಾವನಾತ್ಮಕ ಮೈಲಿಗಲ್ಲು. ಬೈಸಿಕಲ್, ಎತ್ತಿನಗಾಡಿ, ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಊರೂರು ಸುತ್ತಿ ಪಕ್ಷ ಸಂಘಟನೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಬಿಎಸ್‌ವೈ ಅವರು ಬಹಳ ಕಷ್ಟಪಟ್ಟು 1988 ರಲ್ಲಿ ಈ ಕಾರನ್ನು ಖರೀದಿಸಿದ್ದರು. ಈ ಕಾರು ತಂದೆಯವರ ರಾಜಕೀಯ ಜೀವನದ ಸುದೀರ್ಘ ಪಯಣದ ಸಾಕ್ಷಿಯಷ್ಟೇ ಆಗಲಿಲ್ಲ, ನೂರಾರು ಸಂಘಟಕರನ್ನು, ಸಾವಿರಾರು ಕಾರ್ಯಕರ್ತರನ್ನು ಹೊತ್ತೊಯ್ದು ರಾಜ್ಯಾದ್ಯಂತ ಪ್ರಯಾಣಿಸಿ, ಇಂದು ಹೆಮ್ಮರವಾಗಿ ಬೆಳೆದಿರುವ ಭಾರತೀಯ ಜನತಾ ಪಾರ್ಟಿಯ ಸಂಘಟನೆಗೆ ತನ್ನ ಶ್ರಮದ ಶಕ್ತಿಯನ್ನು ಸಮರ್ಪಿಸಿದ ‘ಕಮಲ ರಥ’ವಾಗಿದೆ. ಧರ್ಮ ಸಂಸ್ಥಾಪನೆಗಾಗಿ ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಪರಮಾತ್ಮ ಪಾಂಚಜನ್ಯ ಮೊಳಗಿಸಿದ ರೀತಿಯಲ್ಲೇ ಭಾರತದಲ್ಲಿ ಭಾರತೀಯತೆಯ ಸಂರಕ್ಷಣೆಗಾಗಿ ಹಾಗೂ ಧರ್ಮ ರಾಜಕಾರಣಕ್ಕಾಗಿ ಭಾರತೀಯ ಜನತಾ ಪಾರ್ಟಿಯು ಜನ್ಮ ತಾಳಿತು. ಹಿರಿಯರಾದ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪಾಯಿ, ಲಾಲ್ ಕೃಷ್ಣ ಅಡ್ವಾಣಿಯವರೂ ಸೇರಿದಂತೆ ರಾಷ್ಟ್ರೀಯ ಪ್ರಮುಖರು ಹಾಗೂ ಸಂಘದ ಹಿರಿಯರು ರಾಜ್ಯ ಪ್ರವಾಸ ಕೈಗೊಂಡಾಗಲೆಲ್ಲಾ ಕರುನಾಡಿನ ಮೂಲೆ ಮೂಲೆಗೂ ಈ ಕಾರು ಸಂಚರಿಸಿ, ಕಮಲ ಪಡೆಯ ಸೇನಾನಿಗಳು ಹಾಗೂ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿ ವಿಜಯರಥದ ಸಂಕೇತದಂತೆ ಅಭಯದ ಮುದ್ರೆ ಒತ್ತಿದ ನೆನಪನ್ನು ಇಂದಿಗೂ ಲಕ್ಷಾಂತರ ಕಾರ್ಯಕರ್ತರು ಮರೆತಿಲ್ಲ. ಕಾರ್ಯಕರ್ತರು ಹಾಗೂ ಬಿಎಸ್‌ವೈ ಅವರ ನಡುವಿನ ಬಾಂಧವ್ಯದ ಕೊಂಡಿಯಂತೆ ಈ ಕಾರು ದಶಕಗಳಿಗೂ ಹೆಚ್ಚಿನ ಕಾಲ ತನ್ನ ಸೇವೆಯನ್ನು ಸಮರ್ಪಿಸಿದೆ. ಬಿಎಸ್‌ವೈ ಅವರ ಪ್ರತಿ ಚುನಾವಣೆಯಲ್ಲಿ ಕಮಲವನ್ನು ಅರಳಿಸಿ, ವಿಜಯದ ನಗೆ ಬೀರಿ ಸಂಚರಿಸಿದೆ. ಈ ಕಾರಣಕ್ಕಾಗಿಯೇ ಬಿಎಸ್ವೈ ಅವರು CKR-45 ಅಂಬಾಸಿಡರ್ ಅನ್ನು ಕುಟುಂಬ ಸದಸ್ಯನಂತೆ ಈ ಕ್ಷಣಕ್ಕೂ ಪ್ರೀತಿಸುತ್ತಾರೆ, ಅದರ ದ್ಯೋತಕವಾಗಿ ನೆನಪಾದಾಗಲೆಲ್ಲ ಇದರಲ್ಲಿ ಪಯಣಿಸುತ್ತಾರೆ. CKR -45 ನಮ್ಮ ಕುಟುಂಬದ ಸದಸ್ಯ ಮಾತ್ರವಲ್ಲ, ಬಿಜೆಪಿಯ ಒಬ್ಬ ಹಿರಿಯ ಕಾರ್ಯಕರ್ತನೂ ಹೌದೆನ್ನುವುದು ಶಿಕಾರಿಪುರದ ಹಿರಿಯ ಕಾರ್ಯಕರ್ತರ ಅಭಿಮತ. ಈ ಹಿನ್ನೆಲೆಯ ಪ್ರೇರಣೆ CKR-45 ನನ್ನಲ್ಲೂ ಭಾವನಾತ್ಮಕ ಸಂಬಂಧ ಬೆಸೆಯಲು ಕಾರಣವಾಗಿದೆ,ಇದರ ಪ್ರತೀಕವಾಗಿ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರಲ್ಲಿ ಬಾಂಧವ್ಯದ ಬೆಸುಗೆ ಸ್ಥಿರವಾಗಿ ಉಳಿಸಲು ಇಂದಿಗೂ,ಮುಂದೆಯೂ CKR-45 ಶಿಕಾರಿಪುರದ ಪ್ರತಿ ರಸ್ತೆಗಳಲ್ಲಿ ಆಗಾಗ ಸಂಚರಿಸಲಿದೆ. ಹಳೆಯ ನೆನಪುಗಳನ್ನೊತ್ತು ಬಿಎಸ್‌ವೈ ಅವರ ಪರಿಶ್ರಮ ಹಾಗೂ ಜನರೊಂದಿಗಿನ ಭಾವನಾತ್ಮಕ ಸಂಬಂಧದ ಕೊಂಡಿಯಾಗಿ ನಮ್ಮೊಂದಿಗೆ ದೀರ್ಘ ಕಾಲ ಜತೆಗಿರಲಿದೆ. CKR-45 ಬಿಜೆಪಿ-ಬಿಎಸ್‌ವೈ ಹಾಗೂ ಕಾರ್ಯಕರ್ತರ ನಡುವಿನ ಐತಿಹಾಸಿಕ ಹೆಜ್ಜೆಯ ಗುರುತಾಗಿ ಉಳಿದಿದೆ. CKR -45 ಗೆ ನಿಮ್ಮ ಪ್ರೀತಿಯ ಹಾರೈಕೆಯಿರಲಿ, ಅದರ ಪ್ರೇರಣೆಯ ಸ್ಪರ್ಶ ಪಡೆಯುತ್ತಿರುವ ನನಗೆ ನಿಮ್ಮ ಆಶೀರ್ವಾದವಿರಲಿ. ನಿಮ್ಮ ಬಿ ವೈ ವಿಜಯೇಂದ್ರ

Vijayendra Yediyurappa

20,321 Aufrufe • vor 10 Monaten

BYVijayendra's profile picture

ಕರ್ನಾಟಕ ಸರ್ಕಾರವಾಗಲಿ, ಕರ್ನಾಟಕ ಲೋಕಸೇವಾ ಆಯೋಗವಾಗಲಿ ತಾವೊಂದು ನೇಮಕಾತಿ ಅಥವಾ ಪರೀಕ್ಷೆ ನಡೆಸಬೇಕಾದರೆ ವಿದ್ಯಾರ್ಥಿ ಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳುವುದು ಸಹಜ ನ್ಯಾಯದ ಪ್ರತೀಕ, ಆದರೆ ಈ ತಿಂಗಳ 27ರಂದು 2023-24 ರ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ತರಾತುರಿಯಲ್ಲಿ ದಿನಾಂಕ ಪ್ರಕಟಿಸಿರುವ ಕೆ.ಪಿ.ಎಸ್.ಸಿ ನಡೆ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಹೊರ ಜಿಲ್ಲೆಗಳಿಂದ ಪರೀಕ್ಷೆಗೆ ಹಾಜರಾಗುವ ಗ್ರಾಮೀಣ ಅಭ್ಯರ್ಥಿಗಳು ಹಾಗೂ ಈಗಾಗಲೇ ಖಾಸಗಿ ಉದ್ಯೋಗ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ವಾರಾಂತ್ಯದ ರಜಾ ದಿನಾಂಕ ನಿಗದಿ ಮಾಡಬೇಕೆಂದು ಮನವಿ ನೀಡಿದ್ದರೂ ಹಠಕ್ಕೆ ಬಿದ್ದಿರುವ ಕೆ.ಪಿ.ಎಸ್.ಸಿ ಪರೀಕ್ಷೆ ಮಾಡಿಯೇ ಸಿದ್ದ ಎಂಬಂತೆ ವರ್ತಿಸುತ್ತಿರುವುದು ಕಠೋರತನದ ನಡೆಯಾಗಿದೆ. ಅಲ್ಲದೇ 2017-18 ರ ನಂತರ ಈಗಷ್ಟೇ ಪರೀಕ್ಷೆ ನಿಗದಿಯಾಗಿದ್ದು ಕನಿಷ್ಠ 60 ದಿನಗಳಾದರೂ ಕಾಲಾವಕಾಶ ನೀಡದಿರುವ ನಿರ್ಧಾರ ಸರ್ಕಾರದ ಮೇಲೆ ಅನುಮಾನ ಹೆಚ್ಚಿಸಿದೆ. ವರ್ಷಾನುಗಟ್ಟಲೆ ಕಠಿಣ ಪರಿಶ್ರಮ ಪಟ್ಟು ಪೂರ್ವ ಸಿದ್ಧತೆ ಮಾಡಿಕೊಂಡಿರುವ ಅಭ್ಯರ್ಥಿಗಳ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸದೇ ತರಾತುರಿ ನಿರ್ಧಾರ ಕೈಗೊಂಡಿರುವ ಕೆ.ಪಿ.ಎಸ್.ಸಿ ನಡೆ ಖಂಡನೀಯ. ಸರ್ಕಾರ ಹಾಗೂ ಕೆ.ಪಿ.ಎಸ್.ಸಿ ಅಧಿಕಾರಿಗಳು ನಿರ್ಧಾರ ಬದಲಿಸಿ ಪರಿಕ್ಷಾರ್ಥಿ ಉದ್ಯೋಗಾಕಾಂಕ್ಷಿಗಳಿಗೆ ಅನಾನುಕೂಲವಾಗದಂತೆ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. #postponekas #KPSC CM of Karnataka Secretary KPSC

Vijayendra Yediyurappa

26,166 Aufrufe • vor 1 Jahr

BYVijayendra's profile picture

ಕನ್ನಡದ ಬಗ್ಗೆ ‘ಮೊಸಳೆ ಕಣ್ಣೀರು ಸುರಿಸುವ’ ಮುಖ್ಯಮಂತ್ರಿ Siddaramaiah ನವರ ನೇತೃತ್ವದ Karnataka Congress ಸರ್ಕಾರದ ಮುಖವಾಡ ಕಳಚಿಬಿದ್ದಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ, ಇರುವ ಶಾಲೆಗಳು ದೈನೇಸಿ ಪರಿಸ್ಥಿತಿಯಲ್ಲಿವೆ, ಆ ಶಾಲೆಗಳಲ್ಲೂ ಶಿಕ್ಷಕರಿಲ್ಲ, 60,000 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ, ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ, ಸರ್ಕಾರದ ಬಳಿ ಏನೇನೂ ಉಳಿದಿಲ್ಲ ಇವರಿಂದ ಕನ್ನಡ ತನ ಹೇಗೆ ಉಳಿಯಲು ಸಾಧ್ಯ? ಎಂದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ. ಈ ಸರ್ಕಾರದಿಂದ ಕನ್ನಡದ ಉದ್ಧಾರ ಸಾಧ್ಯವೇ ಇಲ್ಲ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ, ಶಿಕ್ಷಕರಿಗಂತೂ ಕೆಲಸ ಇಲ್ಲವೇ ಇಲ್ಲ ಎಂಬ ವಾಸ್ತವ ಪರಿಸ್ಥಿತಿಯನ್ನು ಬಿಚ್ಚಿಡಲಾಗಿದೆ. ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ರಾಜ್ಯವಾಗಿಸಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ. ತನ್ನ ಶೂನ್ಯ ಪರಿಸ್ಥಿತಿಯನ್ನು ಮುಚ್ಚಿಕೊಳ್ಳಲು ಕನ್ನಡಿಗರ ದಿಕ್ಕು ತಪ್ಪಿಸುವ ಅಸತ್ಯದ ವಿವಾದಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಗೊಂದಲ ಮೂಡಿಸುತ್ತಿದೆ. #CongressFailsKarnataka

Vijayendra Yediyurappa

22,257 Aufrufe • vor 1 Jahr

BYVijayendra's profile picture

'ರೋಮ್ ಹೊತ್ತಿ ಉರಿಯುತ್ತಿದ್ದರೆ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ' ಎಂಬಂತೆ ಡಿಸಿಎಂ DK Shivakumar ಅವರು ಸಮಾವೇಶ ಸಂಘಟಿಸಿ ಸಾಧನೆಯ ಹೆಸರಲ್ಲಿ ಪಿಟೀಲು ಬಾರಿಸಲು ಬೆಂಗಳೂರು ತೊರೆದು ಹೋಗಿದ್ದಾರೆ. ಬೆಂಗಳೂರಿನ ಜನ ಮಳೆಯ ತತ್ತರದಿಂದ ನರಳುತ್ತಿದ್ದರೆ ರಾಜ್ಯದ Karnataka Congress ಸರ್ಕಾರ ಸಮಾವೇಶದ ಹೆಸರಿನಲ್ಲಿ ಮೋಜು ಮಾಡುತ್ತಿದೆ. ರಾಜಧಾನಿ ಬೆಂಗಳೂರು ಮಳೆಯ ನೀರಿನಿಂದ ಮುಳುಗುತ್ತಿದ್ದರೆ, ಇಡೀ ರಾಜ್ಯದ ಜನತೆಗೆ ಬೆಲೆ ಏರಿಕೆಯ ಕುಣಿಕೆ ಬಿಗಿಯಲು ಹೊರಟಿರುವ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ಮುಳುಗಿಸುತ್ತಿದೆ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿ, ಗುಂಡಿಗಳು ಹಾಗೂ ಮೂಲಸೌಕರ್ಯಗಳಿಲ್ಲದ ಅವ್ಯವಸ್ಥೆಯ ಆಗರವಾಗಿಸಿ ರಾಜ್ಯದ ಬೊಕ್ಕಸವೆಲ್ಲ ಖಾಲಿಯಾಗಿದ್ದರೂ, ಕೋಟಿ ಕೋಟಿ ಖರ್ಚು ಮಾಡಿ ಅಭಿವೃದ್ಧಿ ಶೂನ್ಯತೆಯನ್ನೇ ಸಾಧನೆ ಎಂಬಂತೆ ಕಾಂಗ್ರೆಸ್ಸಿಗರು ಬಿಂಬಿಸಲು ಹೊರಟಿದ್ದಾರೆ. ಸರ್ಕಾರದ ಬೊಕ್ಕಸ ಖಾಲಿಯಾಗಿ ಕುಳಿತಿದೆ, 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಕಾಂಗ್ರೆಸ್ ಸರ್ಕಾರ ಸಾಧನೆಯ ಹೆಸರಿನಲ್ಲಿ ಸಮಾವೇಶ ಆಯೋಜಿಸಿ ಸ್ವ- ಪ್ರತಿಷ್ಠೆ ಮೆರೆಯಲು ಹೊರಟಿದೆ. ಬೆಂಗಳೂರಿನ ಸ್ಥಿತಿ ತೀವ್ರ ಬಿಗಡಾಯಿಸುತ್ತಿದ್ದು ಈ ಕೂಡಲೇ ಉಸ್ತುವಾರಿಯನ್ನು ಹೊತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜಧಾನಿಗೆ ಬಂದು ಜನರ ದುಃಖ ದುಮ್ಮಾನಗಳನ್ನು ಆಲಿಸಲಿ, ಸಂಕಷ್ಟಕ್ಕೆ ಸ್ಪಂದಿಸಲಿ, ಇಲ್ಲದಿದ್ದರೆ ಬೆಂಗಳೂರಿಗರ ಆಕ್ರೋಶವನ್ನು ಎದುರಿಸಲು ಸಿದ್ದರಾಗಲಿ. #CongressFailsKarnataka

Vijayendra Yediyurappa

12,282 Aufrufe • vor 1 Jahr

Keine weiteren Inhalte verfügbar