
Dr Sudhakar K
@DrSudhakar_ • 326,303 subscribers
ಕನ್ನಡಿಗ | Nationalist | MP | Member of Standing Committee on Finance, Consultative Committee for the MEA & Central Silk Board | Trustee, CPA | Ex-Minister, GoK
Shorts
Videos

ಲಂಚವೇ ಕಾಂಗ್ರೆಸ್ ಪಕ್ಷದ ಪರಮ ಧರ್ಮ ಅನ್ನುವ ಸತ್ಯವನ್ನ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆಗಳು.
Dr Sudhakar K10,995 views • 1 month ago

NEET ಪರೀಕ್ಷೆ ಬರೆಯುವ ಪ್ರತಿಯೊಬ್ಬ ಪ್ರಾಮಾಣಿಕ ವಿದ್ಯಾರ್ಥಿಯ ಭವಿಷ್ಯವನ್ನು ರಕ್ಷಿಸುವುದು ಕೇಂದ್ರ ಸರ್ಕಾರದ ಅಚಲ ಬದ್ಧತೆ. ಯಾವುದೇ ಅಕ್ರಮ, ಲೋಪ ಅಥವಾ ದುರುದ್ದೇಶಿತ ಕೃತ್ಯ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಖಚಿತ. ಇದರಲ್ಲಿ ಯಾವುದೇ ಮುಲಾಜಿಲ್ಲ, ರಾಜಿ ಪ್ರಶ್ನೆಯೇ ಇಲ್ಲ. ಆದರೆ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ತಂದೆ-ತಾಯಂದಿರ ಆತಂಕವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಹಾಗೂ ವಿಪಕ್ಷಗಳ ಕೀಳು ರಾಜಕೀಯ ಖಂಡನೀಯ. ಈ ವಿಷಯವನ್ನು ಸಂಸತ್ತಿನಲ್ಲಿ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಅವಕಾಶವಿದ್ದರೂ, ಸದನದ ಕಲಾಪಕ್ಕೆ ಅಡ್ಡಿಪಡಿಸಿ ಬೀದಿಗಿಳಿದು ನಾಟಕವಾಡುವುದು ವಿದ್ಯಾರ್ಥಿಗಳ ಮೇಲಿನ ಕಾಳಜಿಯಲ್ಲ; ಅದು ಕೀಳು ರಾಜಕೀಯ. ಇಂದು NEET ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ನನ್ನ ನೇರ ಪ್ರಶ್ನೆಗಳು: 1️⃣ ನಿಮ್ಮದೇ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ ಮತ್ತು ಭಾಷಾಂತರದ ಎಡವಟ್ಟಿನಿಂದ KPSC ಪ್ರಿಲಿಮ್ಸ್ ಪರೀಕ್ಷೆಯನ್ನು ಎರಡು ಬಾರಿ ನಡೆಸುವಂತಾಗಿ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ಅನಿಶ್ಚಿತವಾದಾಗ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೇ? 2️⃣ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವಕರ ಮೇಲೆ ಕ್ರೂರ ಲಾಠಿಚಾರ್ಜ್ ನಡೆದಾಗ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೇ? 3️⃣ ಬೆಂಗಳೂರಿನಲ್ಲಿ IPL ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಸೂಕ್ತ ಭದ್ರತಾ ವ್ಯವಸ್ಥೆಯ ಕೊರತೆಯಿಂದ 11 ಅಮಾಯಕ ಯುವಕರು ಪ್ರಾಣ ಕಳೆದುಕೊಂಡ ದುರಂತಕ್ಕೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೇ? ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದಾಗ, ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಬೀಸಿದಾಗ, ಅಮಾಯಕರು ಪ್ರಾಣ ಕಳೆದುಕೊಂಡಾಗ ಮೌನವಾಗಿದ್ದ ಕಾಂಗ್ರೆಸ್, ಇಂದು ವಿದ್ಯಾರ್ಥಿಗಳ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಕಪಟ ರಾಜಕೀಯದ ಪರಮಾವಧಿ. ವಿದ್ಯಾರ್ಥಿಗಳ ಹಿತಾಸಕ್ತಿಯೇ ಕೇಂದ್ರ ಸರ್ಕಾರದ ಮೊದಲ ಆದ್ಯತೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿಮ್ಮ ರಾಜಕೀಯದ ದಾಳವಾಗಲು ನಾವು ಎಂದಿಗೂ ಬಿಡುವುದಿಲ್ಲ. BJP Karnataka TV9 Kannada
Dr Sudhakar K15,186 views • 3 months ago

ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 36 ಲಕ್ಷ ರೂಪಾಯಿ ಸಬ್ಸಿಡಿ ಪಡೆದು ಪಾಲಿಹೌಸ್ ನಿರ್ಮಿಸಿ ಹೂವಿನ ತೋಟ ಮಾಡಿರುವ ನಮ್ಮ ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದ ಪ್ರಗತಿಪರ ರೈತರಾದ ಶ್ರೀ ರಾಮಾಂಜಿ ಅವರು 2 ಎಕರೆ ಜಮೀನಿನಲ್ಲಿ ವರ್ಷಕ್ಕೆ ಸುಮಾರು 60 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ರೈತಪರ ಯೋಜನೆಗಳನ್ನು ಸೂಕ್ತ ರೀತಿ ಉಪಯೋಗ ಮಾಡಿಕೊಂಡರೆ ನಮ್ಮ ಕೃಷಿಕರಿಗೆ ಎಷ್ಟು ಲಾಭ ಆಗುತ್ತದೆ ಎಂದುವುದಕ್ಕೆ ರಾಮಾಂಜಿ ಅವರೇ ಸಾಕ್ಷಿ. ಭೂಮಿಯನ್ನೇ ನಂಬಿ ಕೃಷಿ ಮಾಡುವ ರೈತರನ್ನ ಆ ಭೂತಾಯಿ ಎಂದಿಗೂ ಕೈಬಿಡುವುದಿಲ್ಲ. ಎಲ್ಲ ರೈತರು ಕೇಂದ್ರ ಸರ್ಕಾರದ ಈ ರೀತಿಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ.
Dr Sudhakar K27,270 views • 10 months ago

ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಐಟಿ ಉದ್ಯೋಗಿಯಾಗಿ ನೆಲೆಸಿದ್ದ ನಮ್ಮ ಕರ್ನಾಟಕ ಮೂಲದ, ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ ಅವರು ಶನಿವಾರ ಅಲ್ಲಿ ನಡೆದ ಶೂಟೌಟ್ ನಲ್ಲಿ ಹತ್ಯೆಗೀಡಾಗಿರುವುದು ನಮ್ಮೆಲ್ಲರಿಗೂ ಅತ್ಯಂತ ಆಘಾತಕಾರಿ ಮತ್ತು ದುಃಖಕರ ಸಂಗತಿ. ಮೃತ ದುರ್ದೈವಿ ಚಂದನ್ ಕುಮಾರ್ ಅವರ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತಾ, ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಅವರ ಮೃತದೇಹವನ್ನು ಆದಷ್ಟು ಶೀಘ್ರದಲ್ಲಿ ಭಾರತಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ಚಂದನ್ ಕುಮಾರ್ ಅವರ ಹೆತ್ತವರ ದುಃಖದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಭಾಗಿ🙏🏽
Dr Sudhakar K17,458 views • 9 months ago

ರಸ್ತೆ ಹೇಗಿರಬೇಕು ಅಂದರೆ ಹೀಗಿರಬೇಕು ಎನ್ನುವಂತಿದೆ ನಮ್ಮ ಚಿಕ್ಕಬಳ್ಳಾಪುರದ ಈ ಚಂದದ, ಚೊಕ್ಕವಾದ ರಸ್ತೆ! ಚಿಕ್ಕಬಳ್ಳಾಪುರದ ಡಿಸಿ ಕಚೇರಿಯಿಂದ ಗೌರಿಬಿದನೂರು ಮಾರ್ಗವಾಗಿ ಮಧುಗಿರಿಯ ಬೈರೇನಹಳ್ಳಿ ಕ್ರಾಸ್ ತಲುಪುವ NH-69 ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ರಸ್ತೆ ಎರಡು ವರ್ಷಗಳ ಹಿಂದೆ ಬಹಳ ಕಿರಿದಾಗಿತ್ತು. ಅಷ್ಟೇ ಅಲ್ಲದೆ ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟುಮಾಡುವ ಜೊತೆಗೆ ಹಲವಾರು ಅಪಘಾತಗಳಿಗೂ ಈ ರಸ್ತೆ ಕಾರಣವಾಗಿತ್ತು. 2022-23 ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಈ ರಸ್ತೆಯನ್ನು ಹೇಗಾದರೂ ಮಾಡಿ ವಿಸ್ತರಣೆ ಮಾಡಿಸಿ ಅಭಿವೃದ್ಧಿ ಪಡಿಸಬೇಕೆಂದು ಹಲವಾರು ಬಾರಿ ಖುದ್ದಾಗಿ ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ, ಅವರಿಗೆ ಮನವರಿಕೆ ಮಾಡಿಕೊಟ್ಟು ಬರೋಬ್ಬರಿ ₹398 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 51 ಕಿಮೀ ಉದ್ದದ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಮಂಜೂರು ಮಾಡಿಸಿದ್ದೆ. ಇವತ್ತು ಈ ಸುಂದರವಾದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ರಸ್ತೆ ಕಾಮಗಾರಿಯ ಉತ್ಕೃಷ್ಟ ಗುಣಮಟ್ಟದ ಬಗ್ಗೆ ಕರೆ ಮಾಡಿ, ವಾಟ್ಸಾಪ್ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಾನು ಕಷ್ಟಪಟ್ಟು, ಛಲ ಬಿಡದೆ ಮಾಡಿಸಿದ ಕೆಲಸದಿಂದ ಜನರಿಗೆ ಉಪಯೋಗವಾದರೆ, ಆ ಕೆಲಸವನ್ನ ಮೆಚ್ಚಿಕೊಂಡು ಜನ ಬೆನ್ನು ತಟ್ಟಿದರೆ ಅದಕ್ಕಿಂತ ದೊಡ್ಡ ಸಂತೋಷ ಒಬ್ಬ ಜನಪ್ರತಿನಿಧಿಗೆ ಇನ್ನೇನಿರಲು ಸಾಧ್ಯ! ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಬೆಂಬಲ, ಸಹಕಾರ ಇದ್ದರೆ ನಮ್ಮ ಚಿಕ್ಕಬಳ್ಳಾಪುರವನ್ನ ಇನ್ನಷ್ಟು ಅಭಿವೃದ್ಧಿ ಮಾಡಲು ನಾನು ಸದಾ ಬದ್ಧ.
Dr Sudhakar K19,982 views • 11 months ago

ಮುಂಬರುವ ವಿಧಾನಸಭಾ ಚುನಾವಣೆಗೆ ನಮ್ಮ BJP Karnataka ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು 'ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ'ವನ್ನು ಹಮ್ಮಿಕೊಳ್ಳಲಾಗಿದೆ. ನಿಮ್ಮ ಒಂದು ಸಲಹೆ ಭವ್ಯ ಕರ್ನಾಟಕದ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಬನ್ನಿ ಭಾಗವಹಿಸಿ, ನವ ಭಾರತಕ್ಕಾಗಿ ನವ ಕರ್ನಾಟಕ ಕಟ್ಟುವ ಕೆಲಸದಲ್ಲಿ ಕೈಜೋಡಿಸಿ. #BJPYeBharavase
Dr Sudhakar K52,793 views • 3 years ago

ಕೊರೋನಾದಂತಹ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ಪಿಡುಗಿಗೆ ಪ್ರಧಾನಿ Narendra Modi ಅವರ ಸರ್ಕಾರ ಕೇವಲ 11 ತಿಂಗಳಲ್ಲಿ ಲಸಿಕೆ ಕಂಡುಹಿಡಿದು, ಸಮರೋಪಾದಿಯಲ್ಲಿ 100 ಕೋಟಿಗೂ ಹೆಚ್ಚು ಭಾರತೀಯರಿಗೆ ಮೂರು ಡೋಸ್ ಲಸಿಕೆ ಒದಗಿಸಿದ್ದರಿಂದಲೇ ಇಂದು ನಮ್ಮ ಜನಜೀವನ, ಆರ್ಥಿಕತೆ ಇಷ್ಟು ಬೇಗ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗಿದೆ. ಪ್ರಧಾನಿ ಮೋದಿ ಅವರ ದಿಟ್ಟ ನಾಯಕತ್ವ ಇಲ್ಲದ ಕೊರೋನಾ ಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯ. ಕೊರೋನಾ ವಿರುದ್ಧದ ಸಮರದಲ್ಲಿ ಕರ್ನಾಟಕದ ಜನತೆಗೆ ಸಣ್ಣ ಅಳಿಲು ಸೇವೆ ಸಲ್ಲಿಸಲು ಅವಕಾಶ ದೊರೆತಿದ್ದು ನನ್ನ ಜೀವನದ ಸಾರ್ಥಕ ಕ್ಷಣಗಳಲ್ಲೊಂದು ಎಂದು ಭಾವಿಸಿದ್ದೇನೆ.
Dr Sudhakar K24,810 views • 2 years ago
No more content to load