
ನಮ್ಮ ನಾಡು ನಮ್ಮ ಆಳ್ವಿಕೆ
@karnatakaparty1 • 4,118 subscribers
Voice of Kannada, Kannadiga, Karnataka. A people’s movement evolving into a political force. For those who believe in #ನಮ್ಮನಾಡು_ನಮ್ಮಆಳ್ವಿಕೆ.
Videos

ಕನ್ನಡದ ಖ್ಯಾತ ನಟಿ ಸತತ ಎರಡು ಬಾರಿ ರಾಜ್ಯ ಪ್ರಶಸ್ತಿ ಮತ್ತು ಈ ವರ್ಷದ ಫಿಲಂಫೇರ್ ವಿಜೇತೆ, ಅಕ್ಷತಾ ಪಾಂಡವಪುರ ಅವರು ತಮ್ಮ ಕೆಂಗೇರಿಯ ಕಾಸಾ ಗ್ರಾಂಡಾ ಅಪಾರ್ಟ್ಮೆಂಟಿನ ಕಾರ್ಯಕ್ರಮದಲ್ಲಿ ಕನ್ನಡ ಇಲ್ಲದಿರುವುದನ್ನು ಪ್ರಶ್ನಿಸಿದ್ದರು. ಒಬ್ಬ ಕುಡುಕ ಸುಳ್ಳುಗಾರನ ಮಾತು ನಂಬಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪರಭಾಷಿಕರು ಸಂಧಾನ ಸಭೆಗೆಂದು ಕರೆಸಿ ಎಲ್ಲರೂ ಸೇರಿ ಒಂಟಿ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ವಿಷಯ ತಲುಪಿತು. ಅಕ್ಷತಾ ಅವರ ಅಮ್ಮ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಫೋನ್ ಅನ್ನು ಕೂಡಾ ಕಿತ್ತುಕೊಂಡು, ಅಕ್ಷತಾ ಅವರ ಯಾವ ಸಮಜಾಯಿಷಿಗೂ ಅವಕಾಶ ಕೊಡದೇ ದಾದಾಗಿರಿ ನಡೆಸಲಾಗುತ್ತಿತ್ತು. ವಿಷಯ ತಿಳಿದ ಚಿತ್ರಸಾಹಿತಿ, ನಮ್ಮನಾಡು ನಮ್ಮಆಳ್ವಿಕೆಯ ಕವಿರಾಜ್ ಮತ್ತು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ಅವರ ಬಳಗದೊಂದಿಗೆ ಅಲ್ಲಿಗೆ ಧಾವಿಸಿ ಪ್ರತಿಭಟನೆ ನಂತರ ಆ ಸುಳ್ಳುಗಾರನ ಸುಳ್ಳನ್ನು ಎಲ್ಲರೆದುರು ಸಾಕ್ಷಿ ಸಮೇತ ತೆರೆದಿಟ್ಟು ಅವನೇ ಒಪ್ಪಿಕೊಳ್ಳುವಂತೆ ಮಾಡಿ, ಅಕ್ಷತಾ ಅವರಲ್ಲಿ ಕ್ಷಮೆ ಕೇಳುವಂತೆ ಮಾಡಲಾಯಿತು. ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಪ್ರಮುಖ ಆದ್ಯತೆ ನೀಡುವುದಾಗಿ ಎಲ್ಲರೂ ಒಪ್ಪಿಕೊಂಡರು. ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಈ ಪರಭಾಷಿಕರ ದೌರ್ಜನ್ಯವನ್ನು ಪ್ರತಿಭಟಿಸದೇ ಹೋದರೆ ಖಂಡಿತಾ ಕನ್ನಡಿಗರು ಸದ್ಯದಲ್ಲೇ ಕನ್ನಡ ನಾಡಲ್ಲೇ ಅನಾಥರಂತೆ ಬದುಕಬೇಕಾಗುತ್ತದೆ ಎಂಬುದು ಶತಸಿದ್ಧ. #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ54,705 görüntüleme • 14 gün önce

ಇನ್ನೂ FIR ಪ್ರತಿ ಇಲ್ಲ, ತಪ್ಪು ಮಾಡದ ಕನ್ನಡಿಗ ಒಳಗೆ, ತಪ್ಪು ಮಾಡಿದ North Indian ಹೊರಗೆ!!!
ನಮ್ಮ ನಾಡು ನಮ್ಮ ಆಳ್ವಿಕೆ49,849 görüntüleme • 1 yıl önce

ಅಕ್ರಮವಾಗಿ ಸರ್ಕಾರಿ ಜಾಗದಲ್ಲಿದ್ದವರ ಸಮೀಕ್ಷೆ ಮಾಡುತ್ತಿರುವ ಪರಿ ಇದು! ಎಷ್ಟು ನಿಜ ಎಷ್ಟು ಸುಳ್ಳು? ಪೆನಗೊಂಡ ಅಂತೆ, ಹಿಂದಿ ಅಂತೆ! ಕೈನಲ್ಲಿ ತೆಲಗು ಚೀಲ. ಜೊತೆಗಿರುವವರು ಮಾತನಾಡುತ್ತಿರುವುದು ಉರ್ದು! ವಲಸಿಗರ ವೋಟ್ ಬ್ಯಾಂಕ್ ಮಾಡಿಕೊಂಡು ಕರ್ನಾಟಕವನ್ನು ಅವರಿಗೆ ಬಿಟ್ಟುಕೊಡುತ್ತಿದೆ ಕಾಂಗ್ರೆಸ್ ಸರ್ಕಾರ. #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ23,321 görüntüleme • 8 ay önce

ಹುಸಿ ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡಿಗರನ್ನು ದಿಕ್ಕು ತಪ್ಪಿಸುತ್ತಿದ್ದ ವಿದ್ಯಾ ಮಲ್ನಾಡ್ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟ, "ನಮ್ಮ ನಾಡು ನಮ್ಮ ಆಳ್ವಿಕೆ"ಯ ಸದಸ್ಯರೂ ಹಾಗೂ "ಕರ್ನಾಟ ಬಲ" ಪುಟದ ಭುವನೇಶ್ ಅವರು. ಕರ್ಣಾಟಬಲ - karnatabala #ಹಿಂದಿ_ಪರೀಕ್ಷೆ_ನಿಲ್ಲಿಸಿ #StopHindiExams #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ13,748 görüntüleme • 5 ay önce

ಹಿಂದಿ ಹೇರಿಕೆಗೆ ಬಲಿಯಾದ ಮತ್ತೊಂದು ಬದುಕು! "12 ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಹಿಂದಿ ಫೇಲ್ ಆಗಿದ್ದಕ್ಕೆ ಓದು ನಿಲ್ಲಿಸಬೇಕಾಯ್ತು, ಇವತ್ತು ಆಟೋ ಓಡಿಸಿ ಜೀವನ ನಡೆಸುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ಕಡ್ಡಾಯ ಹಿಂದಿ ಇಲ್ಲದಿದ್ದರೆ ನನ್ನ ಬದುಕು ಬೇರೆಯೇ ಇರುತ್ತಿತ್ತು. ಬೇರೆ ರಾಜ್ಯದವರಿಗೆ ಇಲ್ಲದ ಕನ್ನಡದ ಅನಿವಾರ್ಯತೆ, ನಮಗೇಕೆ ಅವರ ಹಿಂದಿಯ ಕಡ್ಡಾಯ?" ಇದು ಹಿಂದಿ ಹೇರಿಕೆಯಿಂದ ತಮ್ಮ ಬದುಕಿನ ದಿಕ್ಕೇ ಬದಲಾಯಿತು ಎನ್ನುವ ಕನ್ನಡಿಗ ಕಾರ್ತಿಕ್ ಅವರ ನೋವಿನ ನುಡಿ. ಇದು ಕಾರ್ತಿಕ್ ಅವರೊಬ್ಬರ ಕಥೆಯಲ್ಲ, ತ್ರಿಭಾಷಾ ನೀತಿಯೆಂಬ ಅವೈಜ್ಞಾನಿಕ ವ್ಯವಸ್ಥೆಯಿಂದಾಗಿ ಕರ್ನಾಟಕದಲ್ಲಿ ಅದೆಷ್ಟೋ ಯುವಕರ ಭವಿಷ್ಯ ಹೀಗೆಯೇ ಮೊಟಕಾಗಿದೆ. ನಮ್ಮ ಮಕ್ಕಳಿಗೆ ಅವರ ಭಾಷೆಯಲ್ಲಿ ಕಲಿಯುವ ಹಕ್ಕನ್ನು ಕಸಿದುಕೊಳ್ಳುವ ಈ ಅನ್ಯಾಯ ನಿಲ್ಲಬೇಕು. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಕೊನೆಗೊಂಡು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನೊಳಗೊಂಡ ದ್ವಿಭಾಷಾ ನೀತಿ ಜಾರಿಯಾಗಲೇಬೇಕು. CM of Karnataka Madhu Bangarappa #ದ್ವಿಭಾಷಾನೀತಿಜಾರಿಯಾಗಲಿ #ImplementTwoLanguagePolicy #StopHindiImposition #ಹಿಂದಿಹೇರಿಕೆನಿಲ್ಲಿಸಿ #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ10,868 görüntüleme • 11 ay önce

ಧ್ರುವ್ ರಾಠಿ ಅವರು ತಮ್ಮ ಇತ್ತೀಚಿನ ಪಹಲ್ಗಾಂ ಘಟನೆ ಕುರಿತ ವಿಡಿಯೋದಲ್ಲಿ ಕನ್ನಡಿಗರ ಸ್ವಾಭಿಮಾನದ ಹೋರಾಟವನ್ನು ಭಯೋತ್ಪಾದಕ ಕೃತ್ಯಗಳೊಂದಿಗೆ ಹೋಲಿಸಿರುವುದು ಅತ್ಯಂತ ಖಂಡನೀಯ. ಇದು ಕನ್ನಡಿಗರ ಶಾಂತಿಯುತ ಹೋರಾಟದ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ. ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟ ಸಂವಿಧಾನಬದ್ಧವಾದ ಹಕ್ಕು. ಇಂತಹ ಹೇಳಿಕೆಗಳು ಸಮಾಜದಲ್ಲಿ ವಿಭಜನೆ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ, ಇಂತಹ ಹೇಳಿಕೆಗಳನ್ನು ಧೃವ್ ರಾಠಿಯವರು ತಕ್ಷಣವೇ ಹಿಂತೆಗೆದುಕೊಂಡು, ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಕಾಪಾಡುವಲ್ಲಿ ಸಹಕರಿಸಬೇಕು. #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ12,646 görüntüleme • 1 yıl önce
Daha fazla içerik yok.