
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
@KEA_karnataka • 53,501 subscribers
Shraddha hi paramagathihi🙏🇮🇳
Videos

#CivilPoliceRecruitment: ಆಗಸ್ಟ್ 2 ರಂದು ನಡೆಯುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಗಳ ನೇಮಕಾತಿ ಪರೀಕ್ಷೆಯ ಪೂರ್ವ ತಯಾರಿಯ ಭಾಗವಾಗಿ #KEA ವತಿಯಿಂದ ಇಂದು ಬೆಂಗಳೂರು ನಗರದ ಪರೀಕ್ಷಾ ಕೇಂದ್ರಗಳ ಮುಖ್ಯ ಮೇಲ್ವಿಚಾರಕರ ಸಭೆ ನಡೆಸಿ, ತರಬೇತಿ ನೀಡಲಾಯಿತು. #KEA ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಕಟ್ಟುನಿಟ್ಟಿನ ನಿಗಾ ವಹಿಸುವ ಹಾಗೂ ಅಧಿಕಾರಿಗಳ ಜವಾಬ್ದಾರಿ ಬಗ್ಗೆಯೂ ವಿವರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ ನಾಯಕ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಫಾಲಾಕ್ಷ ಮತ್ತು ಮನೋಜ್ ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಪೊಲೀಸ್ ಅಧಿಕಾರಿಗಳೂ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು. CM of Karnataka Dr. Sharan Prakash Patil
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA59,746 görüntüleme • 23 gün önce

#CivilPoliceRecruitment: ಆಗಸ್ಟ್ 2ರಂದು ನಡೆಯುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಕೊನೆ ಕ್ಷಣದ ತಯಾರಿಯನ್ನು #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಶನಿವಾರ ರಾತ್ರಿ ಪರಿಶೀಲಿಸಿದರು. #KEA ಕಚೇರಿಯಲ್ಲಿ ಬೃಹತ್ ಕಮಾಂಡ್ ಸೆಂಟರ್ ಸ್ಥಾಪಿಸಿದ್ದು, ಅದರ ಕಾರ್ಯನಿರ್ವಹಣೆಯನ್ನು ಅವರು ವೀಕ್ಷಿಸಿದರು. #KEA ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರೂ ಈ ಸಂದರ್ಭದಲ್ಲಿ ಇದ್ದರು. CM of Karnataka Dr. Sharan Prakash Patil
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA49,306 görüntüleme • 21 gün önce

#VAO ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಯನ್ನು #KEA ಕಚೇರಿಯಲ್ಲಿನ ಕಮಾಂಡ್ ಸೆಂಟರ್ ನಲ್ಲಿ ಕುಳಿತು ವೀಕ್ಷಿಸಿದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ. ಪರೀಕ್ಷೆ ಕಾರಣಕ್ಕೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಕೂಡ ಕಮಾಂಡ್ ಸೆಂಟರ್ ಗೆ ಭೇಟಿ ನೀಡಿ ಕೆಲ ಹೊತ್ತು ಇದ್ದು ವೀಕ್ಷಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA36,922 görüntüleme • 1 yıl önce

#KSET-25: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ #BMTC #conductor ಜಯಮ್ಮ ಅವರಿಗೆ #KEA ಕಡೆಯಿಂದ ಅಭಿನಂದನೆಗಳು. ಬೆಂಗಳೂರಿನವರೇ ಆದ ಅವರು ಕನ್ನಡ ವಿಷಯದಲ್ಲಿ ಕೆಸೆಟ್ ಪರೀಕ್ಷೆ ತೆಗೆದುಕೊಂಡು, ಅರ್ಹರಾಗಿ ಮಹಾತ್ಸಾಧನೆ ಮಾಡಿದ್ದಾರೆ. ನಮ್ಮಂತಹವರೂ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬಹುದು ಎನ್ನುವುದಕ್ಕೆ #KEA ಹಮ್ಮಿಕೊಂಡಿರುವ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯೇ ಕಾರಣ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಷ್ಟೇ ಅಲ್ಲ, #KEA ನಡೆಸಿದ ಪರೀಕ್ಷೆಯಿಂದಲೇ ಕಂಡಕ್ಟರ್ ಉದ್ಯೋಗ ಸಿಕ್ಕಿತು. ಈಗ ಕೆ-ಸೆಟ್ ಆಗಿದೆ. ಮುಂದೊಂದು ದಿನ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಇದೆ ಎನ್ನುತ್ತಾರೆ. ಅವರ ಮಾತುಗಳನ್ನು ಕೇಳಲು ಈ ಕೆಳಗಿನ ವಿಡಿಯೊ ಮೇಲೆ ಕ್ಲಿಕ್ ಮಾಡಿ. CM of Karnataka Dr MC Sudhakar ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA18,739 görüntüleme • 8 ay önce

#PSI ಪರೀಕ್ಷೆ ಸೆ.22ರಂದು ಬೆಂಗಳೂರು ದಾವಣಗೆರೆ ಧಾರವಾಡ ಕಲಬುರ್ಗಿ ಶಿವಮೊಗ್ಗ ವಿಜಯಪುರ ಜಿಲ್ಲೆಗಳ 164 ಕೇಂದ್ರಗಳಲ್ಲಿ ನಡೆಯಲಿದೆ. 66,990 ಮಂದಿ ಪರೀಕ್ಷೆಗೆ ಅರ್ಹರಿದ್ದಾರೆ. ಬಿಗಿ ಬಂದೋಬಸ್ತ್ ನಲ್ಲಿ ನಡೆಸಲು ಪೊಲೀಸ್ ಇಲಾಖೆ ನೆರವು ಕೋರಲಾಗಿದೆ. KEA ED ಎಚ್.ಪ್ರಸನ್ನ ಈ ಕುರಿತು ಹೇಳಿದ್ದು ವಿಡಿಯೊದಲ್ಲಿದೆ. CM of Karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA30,526 görüntüleme • 1 yıl önce

#KSET-23 ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಕೆಇಎ ಇ.ಡಿ ಎಚ್ ಪ್ರಸನ್ನ ಗುರುವಾರ ಮಲ್ಲೇಶ್ವರದ ಕಚೇರಿಯಲ್ಲಿ ಚಾಲನೆ ನೀಡಿದರು. ವಾಣಿಜ್ಯ ಶಾಸ್ತ್ರದ ಅಭ್ಯರ್ಥಿಗಳು ಮೊದಲ ದಿನ ಹಾಜರಿದ್ದರು. ಜು.22ರವರೆಗೆ ದಾಖಲೆ ಪರಿಶೀಲನೆ ಇರುತ್ತೆ. CM of Karnataka Dr MC Sudhakar
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA14,298 görüntüleme • 2 yıl önce
Daha fazla içerik yok.