
Madhu Bangarappa
@Madhu_Bangarapp • 12,005 subscribers
Minister of Primary and Secondary Education | MLA Soraba Constituency | Government of Karnataka. Chairman of Akash Audio and Sharavathi Education Trust
Videos

ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ! ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಯಾವುದೇ ಶುಲ್ಕವಿರುವುದಿಲ್ಲ. ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು, ಆ ಹಾದಿಯಲ್ಲಿ ಆರ್ಥಿಕ ಹೊರೆ ಅಡ್ಡಿಯಾಗಬಾರದು ಎಂಬುದು ನಮ್ಮ ಸರ್ಕಾರದ ಆಶಯ. ಜೊತೆಗೆ, ನಾಳೆಯಿಂದ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗುತ್ತಿದೆ. ಉತ್ತಮ ಮೂಲಸೌಕರ್ಯ ಹಾಗೂ ಪರಿಣಿತ ಶಿಕ್ಷಕರಿರುವ ನಮ್ಮ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ, ಅವರ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಿರಿ.. #MadhuBangarappa #KarnatakaEducation #EducationMinister #GovernmentSchools #KarnatakaStudents
Madhu Bangarappa14,924 次观看 • 6 个月前

"ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ!" ಇಂದು ವಿಧಾನಸಭೆಯಲ್ಲಿ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯ ಅಸ್ಮಿತೆ ಮತ್ತು ಕಲಿಕೆಯ ಬಗ್ಗೆ ನನ್ನ ಸ್ಪಷ್ಟ ನಿಲುವನ್ನು ಹಂಚಿಕೊಂಡೆ. ಮಕ್ಕಳಿಗೆ ಕನ್ನಡವನ್ನು ಇನ್ನಷ್ಟು 'ಚಂದವಾಗಿ', ಅರ್ಥಪೂರ್ಣವಾಗಿ ಹಾಗೂ ಆಳವಾಗಿ ಹೇಗೆ ಒಲಿಸಿಕೊಳ್ಳಬಹುದು ಎಂಬುದರ ಬಗ್ಗೆ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇದಕ್ಕಾಗಿ ನಾನು ಖುದ್ದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ಹಿರಿಯ ಸಾಹಿತಿಗಳಾದ ಶ್ರೀ ಬರಗೂರು ರಾಮಚಂದ್ರಪ್ಪ ಹಾಗೂ ಶ್ರೀ ದೇವನೂರ ಮಹಾದೇವ ಅವರಂತಹ ಗಣ್ಯರೊಂದಿಗೆ ಚರ್ಚಿಸಿ ಸೂಕ್ತ ಸಲಹೆಗಳನ್ನು ಪಡೆದಿದ್ದೇನೆ. ಸುಪ್ರೀಂ ಕೋರ್ಟ್ ಆದೇಶದಂತೆ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕು ಪೋಷಕರಿಗೆ ಇದೆ. ರಾಜ್ಯದಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಇದೆ. ನಮ್ಮ ರಾಜ್ಯದ ಪ್ರಸ್ತುತ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ನನ್ನ ಪೂಜ್ಯ ತಂದೆಯವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪನವರು ಸೇರಿದಂತೆ ಸದನದಲ್ಲಿರುವ ಅನೇಕ ಗಣ್ಯರು ಕನ್ನಡ ಮಾಧ್ಯಮದ ಶಾಲೆಯಲ್ಲೇ ಓದಿ ಉನ್ನತ ಸ್ಥಾನಕ್ಕೇರಿದವರು ಎನ್ನುವುದು ನಮ್ಮೆಲ್ಲರ ಹೆಮ್ಮೆ. ಕನ್ನಡ ಭಾಷೆಯನ್ನು ನಮ್ಮ ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಲಿಸುವ ನಿಟ್ಟಿನಲ್ಲಿ ನಿಮ್ಮ ಉತ್ತಮ ಸಲಹೆಗಳಿಗೆ ಸದಾ ಮುಕ್ತ ಸ್ವಾಗತವಿದೆ. ಬನ್ನಿ, ನಿಮ್ಮ ಸೂಕ್ತ ಸಲಹೆಗಳನ್ನು ನೀಡಿ, ಅವುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ನನ್ನದು. #ಕನ್ನಡಶಿಕ್ಷಣ #ಶಾಲಾಶಿಕ್ಷಣ #ಕನ್ನಡಮಾಧ್ಯಮ #ಶಿಕ್ಷಣದಲ್ಲಿಕನ್ನಡ #ಕನ್ನಡಕಲಿಕೆ
Madhu Bangarappa11,611 次观看 • 6 个月前
没有更多内容可加载