
R. Ashoka
@RAshokaBJP • 145,674 subscribers
ಕನ್ನಡಿಗ | Leader of the Opposition- Karnataka Legislative Assembly
Shorts
Videos

CONGRESS TOOK THE 1980s TREND TOO SERIOUSLY - AND BROUGHT THE 1980s BACK TO KARNATAKA! No Streetlights! No Proper Roads! Government buses need torchlight to see the road ahead! Congress is not taking Karnataka forward. It is driving it backwards. 100 days of DK Shivakumar. 40 years of development gone backwards. #1980s #CongressFailsKarnataka
R. Ashoka10,771 Aufrufe • vor 11 Tagen

ನಾಡದ್ರೋಹಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮತ್ತೊಮ್ಮೆ ಮಹಾದ್ರೋಹ! ಇಲ್ಲಿ ಮುಂಗಾರು ಕ್ಷೀಣಿಸಿ, ಕರ್ನಾಟಕದಲ್ಲಿ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಎದುರಾಗಿದೆ. ಆದರೆ ಈ ಕಳ್ಳ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದೇನು? ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ! ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಜೀವನಾಡಿ KRS ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ! ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಕನ್ನಡಿಗರ ಬೆನ್ನಿಗೆ ಚುಚ್ಚುತ್ತಿರುವ ಚೂರಿಯಲ್ಲದೆ ಮತ್ತಿನ್ನೇನು ಮುಖ್ಯಮಂತ್ರಿಗಳೇ? ಈ ನಾಡದ್ರೋಹಿ Karnataka Congress ಪಕ್ಷದ ಇತಿಹಾಸವೇ ಇಷ್ಟು: ಅಧಿಕಾರವಿಲ್ಲದಾಗ: "ನಮ್ಮ ನೀರು ನಮ್ಮ ಹಕ್ಕು" ಅಂತ ನಾಟಕದ ಬೊಬ್ಬೆ! ಅಧಿಕಾರ ಸಿಕ್ಕಾಗ: "ನಮ್ಮ ನೀರು ತಮಿಳುನಾಡಿನ ಹಕ್ಕು" ಅಂತ ಅಧಿಕಾರಕ್ಕಾಗಿ ತಮಿಳುನಾಡಿನ ಎದುರು ಸಂಪೂರ್ಣ ಶರಣಾಗತಿ ಆಗುವುದು. ನಾಡಿನ ಜನತೆಯ ಹಿತ ಕಾಯದೆ ಹೈಕಮಾಂಡ್ ಅಣತಿಯಂತೆ ತುಳುನಾಡಿನ ಜೊತೆ ರಾಜಿ ಮಾಡಿಕೊಳ್ಳುವುದು. ಕೇವಲ ರಾಜಕೀಯ ಮೈತ್ರಿಗಾಗಿ, ಅಧಿಕಾರದ ಆಸೆಗಾಗಿ ಅಂದು DMK, ಇಂದು TVK ಜೊತೆ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರ ಹಿತಕ್ಕಿಂತ ಅಧಿಕಾರದ ಸ್ವಾರ್ಥವೇ ಹೆಚ್ಚಾಯಿತೇ? ಮುಖ್ಯಮಂತ್ರಿ DK Shivakumar ಅವರೇ, ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಯಾವ ಯಾತ್ರೆ ಮಾಡುತ್ತೀರಿ? ನೀರಿಲ್ಲದೆ, ಬೆಳೆಯಿಲ್ಲದೆ ಕಾವೇರಿ ಕೊಳ್ಳದ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡ್ತೀರಾ? ಬೆಂಗಳೂರಿನ ಜನ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಕ್ಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ? ಕನ್ನಡ ನಾಡಿನ ಜನತೆಗೆ ಕನಿಷ್ಠ ನೀರಿನ ಭದ್ರತೆ, ನೀರಿನ ಹಕ್ಕು ನೀಡಲಾಗದ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ! #CongressFailsKarnataka
R. Ashoka40,722 Aufrufe • vor 2 Monaten

ಮತ್ತೊಂದು ನೇಮಕಾತಿ ಪರೀಕ್ಷೆ, ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವೈಫಲ್ಯ. ಮಗದೊಮ್ಮೆ ರಾಜ್ಯದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡಿದ ರಾಜ್ಯ ಕಾಂಗ್ರೆಸ್ ಸರ್ಕಾರ. ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ, OMR ಶೀಟ್‌ಗಳ ಗೊಂದಲ ಹಾಗೂ ಅಭ್ಯರ್ಥಿಗಳು ಪರೀಕ್ಷೆಯಿಂದ ಹೊರನಡೆಯುವಂತಾದ ಘಟನೆ ಆಡಳಿತದ ಸಂಪೂರ್ಣ ವೈಫಲ್ಯ ಮತ್ತು ಕ್ಷಮಿಸಲಾಗದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಸಾವಿರಾರು ಅಭ್ಯರ್ಥಿಗಳು ವರ್ಷಗಳ ಕಾಲ ಶ್ರಮಪಟ್ಟು ಈ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆ ನೀಡಿದ್ದು ಗೊಂದಲ, ಅಸಮರ್ಥ ಆಡಳಿತ ಮತ್ತು ಭಗ್ನಗೊಂಡ ಕನಸುಗಳ ಗುಚ್ಛವನ್ನ. ಈ ವೈಫಲ್ಯದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಶ್ರೀ Priyank Kharge / ಪ್ರಿಯಾಂಕ್ ಖರ್ಗೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಗೊಂದಲವಾದ ಪರೀಕ್ಷೆಯನ್ನು ಸಂಬಂಧಿತ ಕೇಂದ್ರದಲ್ಲಿ ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕು. ಜೊತೆಗೆ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. "ಯುವಕರ ಭವಿಷ್ಯ ಹಾಳು ಮಾಡಿದ ಸರ್ಕಾರಕ್ಕೆ ಉತ್ತರದಾಯಿತ್ವ ಯಾರು?" ಮಾನ್ಯ ಮುಖ್ಯಮಂತ್ರಿ ಶ್ರೀ DK Shivakumar ಅವರೇ ಗೃಹ ಸಚಿವರಿಂದ ತಕ್ಷಣವೇ ರಾಜೀನಾಮೆ ಪಡೆಯಿರಿ. #JusticeForAspirants BJP Karnataka
R. Ashoka17,702 Aufrufe • vor 1 Monat

ಎದೆ ಎತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು, ಆಕ್ರಂದನ ನಮ್ಮ ಮನಸನ್ನ ತಲ್ಲಣಗೊಳಿಸಿದೆ. ಸಿಎಂ Siddaramaiah ಹಾಗು ಡಿಸಿಎಂ DK Shivakumar ಅವರು ಬಹುಶಃ ಕ್ರಿಕೆಟ್ ಆಟಗಾರರ ಜೊತೆ ತೆಗೆಸಿಕೊಂಡ ಸೆಲ್ಫಿ, ಪೋಟೋಗಳನ್ನು ನೋಡಿಕೊಂಡು ನಿನ್ನೆ ನಿಶ್ಚಿಂತೆಯಿಂದ ಮಲಗಿರಬಹುದು. ಆದರೆ ನನಗಂತೂ ನಿನ್ನೆ ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಲು ಸಾಧ್ಯವಾಗಲಿಲ್ಲ. ಕಷ್ಟಪಟ್ಟು ಸಾಕಿ ಸಲಹಿದ ಮಕ್ಕಳು, ಬಾಳಿ ಬದುಕಬೇಕಾದ ಮಕ್ಕಳನ್ನು ಕಳೆದುಕೊಂಡ ಪೋಷಕರ, ಕುಟುಂಬಸ್ಥರ ಕಣ್ಣೀರು, ನೋವು, ಶೋಕವೇ ಇಡೀ ರಾತ್ರಿ ಕಣ್ಣು ಮುಂದೆ ಬರುತ್ತಿತ್ತು. ನಿನ್ನೆ ಸತ್ತಿದ್ದು 11 ಜನ ಮಾತ್ರವಲ್ಲ, ಮಾನವೀಯತೆ ಇಲ್ಲದ ಹೃದಯಹೀನ Karnataka Congress ಪಕ್ಷವೂ ಕನ್ನಡಿಗರ ಪಾಲಿಗೆ ನಿನ್ನೆಯೇ ಸತ್ತು ಹೋಯಿತು.
R. Ashoka66,479 Aufrufe • vor 1 Jahr

What Karnataka Congress promised: Brand Bengaluru What Karnataka Congress delivered: Beach Bengaluru Part-time Bengaluru Development Minister DCM DK Shivakumar avare, if you are done with your brother DK Suresh's Milk Union Elections, kindly give some time to Bengaluru. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಕನ್ನಡಿಗರಿಗೆ ಬೀಚ್ ಬೆಂಗಳೂರು ನೀಡಿರುವ ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಮ್ಮ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹಾಲು ಒಕ್ಕೂಟ ಚುನಾವಣೆ ಉಸಾಬರಿ ಮುಗಿದಿದ್ದರೆ ದಯವಿಟ್ಟು ಸ್ವಲ್ಪ ಬೆಂಗಳೂರಿನ ಅವಸ್ಥೆ ಕಡೆ ಗಮನ ಹರಿಸಿ. #CongressFailsKarnataka
R. Ashoka67,895 Aufrufe • vor 1 Jahr

ದಲಿತ ಮುಖ್ಯಮಂತ್ರಿ ಎಂದು ಕೂಗು ಹಾಕಿದ್ದ ಉಪಮುಖ್ಯಮಂತ್ರಿ Dr. G Parameshwara ಅವರ ತವರು ಜಿಲ್ಲೆಯಲ್ಲೇ ದಲಿತರು ಬರಿಗೈಯಲ್ಲಿ ಮಲ ಹೊರುವ ಶೋಚನೀಯ ಸ್ಥಿತಿಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ DK Shivakumar ಅವರ ನೇತೃತ್ವದ ಸರ್ಕಾರದಲ್ಲಿ ದಲಿತರ ಯಾವುದೇ ಹಕ್ಕುಗಳಿಗೆ ಮೂರು ಕಾಸಿನ ಬೆಲೆ ಇಲ್ಲ. ತುಮಕೂರು ನಗರದ ಕೆಇಬಿ ಎಂಜಿನಿಯರ್ಸ್ ಸಂಘದ ಆವರಣದಲ್ಲಿ ನಾಲ್ವರು ಕಾರ್ಮಿಕರ ಕೈಯಿಂದ ಶೌಚಗುಂಡಿ ಸ್ವಚ್ಛ ಮಾಡಿಸಲಾಗಿದೆ. ಇತ್ತೀಚೆಗೆ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕನಿಂದ ಇಂಥದ್ದೇ ಕೆಲಸ ಮಾಡಿಸಿದ್ದರೂ ಜಿಲ್ಲಾಡಳಿತವಾಗಲೀ, ಸರ್ಕಾರವಾಗಲೀ ಇನ್ನೂ ಎಚ್ಚೆತ್ತಿಲ್ಲ. ❌ ಗ್ಯಾರಂಟಿಗಾಗಿ ಮೂರು ವರ್ಷದಲ್ಲಿ ₹53,059.45 ಕೋಟಿ SCSP-TSP ಹಣದ ದುರ್ಬಳಕೆ ❌ ಪರಿಶಿಷ್ಟ ಜಾತಿ/ಪಂಗಡದ ನಿಗಮಗಳಿಗೆ ಅನುದಾನ ಕಡಿತ ❌ 2025 ರಲ್ಲಿ 2,277 ಪ್ರಕರಣಗಳ ಮೂಲಕ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳ ಹೆಚ್ಚಳ ❌ ಚಿಕ್ಕಬಳ್ಳಾಪುರದ ಜೈ ಭೀಮ್ ಹಾಸ್ಟೆಲ್ ಊಟದಲ್ಲಿ ಹುಳ ಪತ್ತೆ ಪರಿಶಿಷ್ಟರ ಪರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಅಸಲಿಗೆ ಪರಿಶಿಷ್ಟ ಜಾತಿ/ಪಂಗಡಗಳ ಹಿತಕ್ಕೆ ಧಕ್ಕೆಯಾಗುವ ಹೆಜ್ಜೆಯನ್ನೇ ಇರಿಸುತ್ತಿದೆ. ದಲಿತರ ಮೇಲಿನ ದೌರ್ಜನ್ಯದಲ್ಲಿ 'ಮಾದರಿ ರಾಜ್ಯ' ಎಂಬ ಕುಖ್ಯಾತಿಯನ್ನು ಕಾಂಗ್ರೆಸ್ ಕೊಡುಗೆಯಾಗಿ ನೀಡಿದೆ. ಸಂವಿಧಾನ, ಬಾಬಾ ಸಾಹೇಬ್ ಅಂಬೇಡ್ಕರ್ ರ ಹೆಸರು ಹೇಳುವ ಯೋಗ್ಯತೆ ಕಳೆದುಕೊಂಡಿರುವ ಗೃಹ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರು ಮೊದಲು ದಲಿತರ ಮೇಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿ
R. Ashoka14,647 Aufrufe • vor 2 Monaten

ಇದು ಸಮೀಕ್ಷೆ ಅಲ್ಲ, ಸ್ಕ್ಯಾಮ್! ಇಂತಹ ಕಾಟಾಚಾರದ, ಬೂಟಾಟಿಕೆಯ, ತೋರಿಕೆಯ ಜಾತಿ ಸಮೀಕ್ಷೆ ಏಕೆ ಮಾಡುತ್ತಿದ್ದೀರಿ ಸಿಎಂ Siddaramaiah ನವರೇ? ಇದು ಯಾವ ಪುರುಷಾರ್ಥಕ್ಕೆ? ಯಾರ ಲಾಭಕ್ಕೆ? ಸಮೀಕ್ಷೆ ನಡೆಸಬೇಕಾದ ಸಿಬ್ಬಂದಿ ಮನೆ ಮನೆಗೆ ಹೋಗದೇ, ಜನರೊಂದಿಗೆ ಸಂಪರ್ಕವಿಲ್ಲದೆ, ಕೇವಲ ಬಾಗಿಲಿಗೆ "ಸಮೀಕ್ಷೆ ಪೂರ್ಣ" ಎನ್ನುವ ಸ್ಟಿಕ್ಕರ್ ಅಂಟಿಸಿ ಹೊರಸುತ್ತಿದ್ದಾರೆ. ಜನರ ಜಾತಿಯ ಬಗ್ಗೆ ಕೇಳದೆ, ಮಾಹಿತಿ ಸಂಗ್ರಹಿಸದೇ ನಡೆಯುತ್ತಿರುವ ಇದನ್ನು ಸಮೀಕ್ಷೆ ಅನ್ನುತ್ತಾರಾ? ಇದು ಸಮೀಕ್ಷೆ ಅಲ್ಲ, ಇದು ಸರ್ಕಾರಿ ನಿರ್ದೇಶಿತ ಸ್ಕ್ಯಾಮ್! ಜಾತಿ ಗಣತಿ ಹೆಸರಿನಲ್ಲಿ ಈಗಾಗಲೇ 160 ಕೋಟಿ ರೂಪಾಯಿ ಪೋಲು ಮಾಡಿದ್ದೀರಿ. ಈಗ ಒಳಮೀಸಲಾತಿಗಾಗಿ ಮಾಡುತ್ತಿರುವ ಸಮೀಕ್ಷೆಯ ಹೆಸರಿನಲ್ಲಿ ಇನ್ನೊಂದಿಷ್ಟು ಕೋಟಿ ಲೂಟಿ. ಇದು ಯಾವ ಸೀಮೆ ಸಾಮಾಜಿಕ ನ್ಯಾಯ ಸ್ವಾಮಿ? ಜನರ ತೆರಿಗೆ ದುಡ್ಡನ್ನ ಹಗಲು ದರೋಡೆ ಮಾಡುತ್ತಿರುವ Karnataka Congress ದಲಿತರಿಗೆ ಮೋಸ ಮಾಡುತ್ತಿದೆ.
R. Ashoka42,821 Aufrufe • vor 1 Jahr

DyCM DK Shivakumar avare, You are where you are today because of Bengaluru. Because of the hardworking, tax-paying, law-abiding citizens of this great city. Bengalureans built this city with sweat, innovation and discipline. They welcomed investment. They powered Karnataka’s economy. They respected the law. They deserve leadership, not lectures. They deserve solutions, not frustration. If you are politically hurt, sidelined, or disappointed, please do not let that reflect in your approach towards the very people who gave you stature. Bengaluru is not a punching bag. Bengaluru is Karnataka’s pride, India's pride. Please learn to lead with responsibility, speak with balance and respect the citizens who built your political journey. #CongressFailsBengaluru
R. Ashoka19,041 Aufrufe • vor 7 Monaten

ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿರುವ ಕೇರಳ ಮುಖ್ಯಮಂತ್ರಿ ಶ್ರೀ Siddaramaiah ಅವರಿಗೆ ಅಭಿನಂದನೆಗಳು. ಕೇರಳದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಕ್ಕುತ್ತಿತ್ತು. ನತದೃಷ್ಟ ಕನ್ನಡಿಗರು ಮಲಯಾಳಿಗಷ್ಟು ಅದೃಷ್ಟವಂತರಲ್ಲ ಬಿಡಿ!
R. Ashoka24,287 Aufrufe • vor 1 Jahr

ಅನುದಾನ ಬೇಕಾದರೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎಂದು ದರ್ಪ ಮೆರೆದಿದ್ದ ಡಿಸಿಎಂ DK Shivakumar ಸಾಹೇಬರು ಈಗ ಕನ್ನಡ ಸಿನಿಮಾ ಕಲಾವಿದರಿಗೆ ಬಹಿರಂಗ ವೇದಿಕೆಯಲ್ಲಿ ಧಮ್ಕಿ ಹಾಕಿದ್ದಾರೆ. ಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ. ಕಲಾವಿದರು ನಿಮ್ಮ Karnataka Congress ಪಕ್ಷದ ಕಾರ್ಯಕರ್ತರಲ್ಲ. ನಿಮ್ಮ ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಕಲಾವಿದರನ್ನು ನಡೆಸಿಕೊಳ್ಳಬೇಡಿ. ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಿರಿ.
R. Ashoka31,222 Aufrufe • vor 1 Jahr

ಕಾಂಗ್ರೆಸ್ ಸರ್ಕಾರಕ್ಕೆ ಅಕ್ರಮ ಬಾಂಗ್ಲಾದೇಶಿಗಳ ಮೇಲೆ ಯಾಕಿಷ್ಟು ವ್ಯಾಮೋಹ? ರಾಜ್ಯದಲ್ಲಿ ವ್ಯಾಪಕವಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ಜಾಲವನ್ನು ಬಯಲಿಗೆಳೆದಿದ್ದಕ್ಕಾಗಿ ಡಾ. ನಾಗೇಂದ್ರಪ್ಪ ಅವರಿಗೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದ್ದು, ಅವರು ವಿಧಾನಸೌಧದ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಒಂದೆಡೆ ದೇಶದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮತ್ತೊಂದೆಡೆ, ಜವಾಬ್ದಾರಿಯುತ ನಾಗರೀಕರು ಈ ಅಕ್ರಮಗಳನ್ನು ಎತ್ತಿ ತೋರಿಸಿದರೆ ಅವರನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಟ್ಟು ಜೈಲಿಗೆ ಅಟ್ಟಲಾಗುತ್ತಿದೆ. ಪುನೀತ್ ಕೆರೆಹಳ್ಳಿಯಂತಹ ಕಾರ್ಯಕರ್ತರ ಬಂಧನವೇ ಇದಕ್ಕೆ ಸಾಕ್ಷಿ. ಗೃಹ ಸಚಿವ Dr. G Parameshwara ಅವರೇ, ನಿಮ್ಮ ಇಲಾಖೆಯ ಕರ್ತವ್ಯವನ್ನೇ ಜನ ಸಾಮಾನ್ಯರು ಮಾಡುತ್ತಿರುವಾಗ ಅವರಿಗೆ ರಕ್ಷಣೆ ನೀಡುವ ಬದಲು ಪೊಲೀಸರ ಮೂಲಕ ಕಿರುಕುಳ ಕೊಡಿಸುತ್ತಿರುವುದು ಯಾವ ನ್ಯಾಯ? Karnataka Congress ಸರ್ಕಾರಕ್ಕೆ ದೇಶದ, ರಾಜ್ಯದ ಸುರಕ್ಷತೆಗಿಂತ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಯಿತೇ? ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಇರಾದೆ, ದಮ್ಮು-ತಾಕತ್ತು ನಿಮ್ಮ ಸರ್ಕಾರಕ್ಕಿಲ್ಲವೇ? ಜನರಿಗೆ ಕಿರುಕುಳ ನೀಡುವುದನ್ನು ಬಿಟ್ಟು, ಕೂಡಲೇ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪತ್ತೆ ಹಚ್ಚಿ ಹೊರಗಟ್ಟಿ. ಬಾಂಗ್ಲಾ ವಲಸಿಗರ ರಕ್ಷಣೆಗೆ ನಿಂತಿರುವ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ವಿರೋಧಿಯಾಗಿದೆ! #CongressFailsKarnataka
R. Ashoka15,545 Aufrufe • vor 8 Monaten

ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮೆಟ್ರೋ ದರವನ್ನ ಏಕಾಏಕಿ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ. ಸ್ವಾಮಿ ಸಿಎಂ Siddaramaiah ನವರೇ, ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ. ಈ ಕೊಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನ ಹಿಂಪಡೆಯಬೇಕು ಎಂದು Karnataka Congress ಸರ್ಕಾರವನ್ನು ಒತ್ತಾಯಿಸುತ್ತೇನೆ.
R. Ashoka28,295 Aufrufe • vor 1 Jahr

ಸದನದಲ್ಲಿ ಪೊಲೀಸರನ್ನು ಬೆದರಿಸುವುದು ಸ್ಪೀಕರ್ ಗೆ ಧಮ್ಕಿ ಹಾಕುವುದು ಮಹಿಳೆಯರ ಬಟ್ಟೆ ಎಳೆದು ದೌರ್ಜನ್ಯ ಮಾಡುವುದು ಕಾರ್ಯಕರ್ತರ ಕಪಾಳಕ್ಕೆ ಹೊಡೆಯುವುದು Mr.ಯತೀಂದ್ರ ಅವರೇ, ನಿಮ್ಮ ತಂದೆ Siddaramaiah ನವರು ಗೂಂಡಾಗಿರಿ ಪ್ರದರ್ಶನ ಮಾಡಿರುವ ಇಂತಹ ದೃಶ್ಯಗಳು ಇಂಟರ್ ನೆಟ್ ನಲ್ಲಿ ಸಾಕಷ್ಟಿವೆ. ಹಲೋ ಅಪ್ಪ, ಗೂಂಡಾಗಿರಿ ಬಿಟ್ಟುಬಿಡಿ ಅಂತ ಸ್ವಲ್ಪ ಬುದ್ಧಿ ಹೇಳಿ, ಈ ದರ್ಪಕ್ಕೆ ಯಾವುದಾದರೂ ಔಷಧಿ ಇದ್ದರೆ ಬರೆದು ಕೊಡಿ Dr Yathindra Siddaramaiah. ನಮ್ಮ ದೇಶದ ಸನ್ಮಾನ್ಯ ಗೃಹ ಸಚಿವರ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಸ್ವಲ್ಪ ಹಿಡಿತವಿರಲಿ.
R. Ashoka28,648 Aufrufe • vor 2 Jahren

ಸಿಎಂ Siddaramaiah ನವರೇ, ಅಧಿಕಾರ ಇದ್ದಾಗ ನವರಂಗಿ ಆಟ ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ ಅಧಿಕಾರ ಇದ್ದಾಗ ಹಗಲುವೇಷ ವಿರೋಧ ಪಕ್ಷದಲ್ಲಿದ್ದಾಗ ರೋಷಾವೇಶ ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಮುಖ್ಯಮಂತ್ರಿ Siddaramaiah ನವರೇ. ನಿಮ್ಮ ದಿವಾಳಿತನಕ್ಕೆ ಸಾರಿಗೆ ನೌಕರರು ಎಷ್ಟು ದಿನ ನಷ್ಟ ಅನುಭವಿಸಬೇಕು? ನಿಮ್ಮ ದುರಾಡಳಿತಕ್ಕೆ ಜನಸಾಮಾನ್ಯರು ಯಾಕೆ ದಿನನಿತ್ಯ ಪರದಾಡಬೇಕು? ಸಾಕು ಮಾಡಿ ಈ ನಾಟಕ. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರನ್ನು ನೆಮ್ಮದಿಯಾಗಿರಲು ಬಿಡಿ. #ResignSiddaramaiah
R. Ashoka15,624 Aufrufe • vor 1 Jahr

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ನಿಮ್ಮ ಕಾಂಗ್ರೆಸ್ ಕಚೇರಿಯಲ್ಲಿ ಐಟಿ ಸೆಲ್ ನಡೆಸುತ್ತಿದ್ದರಾ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರೇ? ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನು ಕೊಂದ ಉಗ್ರರು ತರಬೇತಿ ಪಡೆದ ಕೇಂದ್ರಗಳು, ಅಲ್ಲಿ ನೆಲೆಸಿದ್ದ ಅವರ 100ಕ್ಕೂ ಹೆಚ್ಚು ಜಿಹಾದಿ ಸಂಗಡಿಗರು, ಅವರ ತಲೆಗೆ ಮತಾಂಧತೆ ತುಂಬಿದ ಭಯೋತ್ಪಾದಕ ಸಂಘಟನೆಗಳ Most Wanted ನಾಯಕರು, ಅವರು ನಡೆಸುತ್ತಿದ್ದ ಮದರಸಾಗಳು, ಅಲ್ಲಿದ್ದ ಶಸ್ತ್ರಾಸ್ತ್ರ, ಸಂವಹನ ಉಪಕರಣಗಳು, ಅವರಿಗೆ ಬೆಂಬಲವಾಗಿ ನಿಂತಿದ್ದ ಪಾಕಿಸ್ತಾನದ ಸೇನಾ ವಾಯುನೆಲೆಗಳು, ಎಲ್ಲವನ್ನೂ ನಮ್ಮ ಸೇನಾಪಡೆಗಳು ನೆಲಸಮ ಮಾಡಿವೆ. ಪಾಕಿಸ್ತಾನದ ಆಶ್ರಯದಲ್ಲಿದ್ದ ಉಗ್ರರ ಸಾಮ್ರಾಜ್ಯವೇ ಧೂಳೀಪಟ ಆಗಿರುವಾಗ ಇನ್ನು ಅಲ್ಲಿ ತಲೆ ಎತ್ತಿದ ಹುಳು-ಹುಪ್ಪಟೆಗಳು ಉಳಿಯುತ್ತವೆಯೇ? ಪಹಲ್ಗಾಮ್ ದಾಳಿ ನಡೆಸಿದ ಉಗ್ರರು ಒಂದು ವೇಳೆ ಇನ್ನೂ ಬದುಕಿದ್ದರೆ, ಅವರು, ಪ್ರಪಂಚದ ಯಾವ ಭೂಭಾಗದಲ್ಲಿ, ಪಾತಾಳದಲ್ಲಿ ಅಡಗಿದ್ದರೂ ನಮ್ಮ ಸೇನಾಪಡೆಗಳು, ರಕ್ಷಣಾ ಪಡೆಗಳು ಇಂದಲ್ಲ ನಾಳೆ ಹಿಡಿದೇ ಹಿಡಿಯುತ್ತಾರೆ. ನಮ್ಮ ಸೇನಾಪಡೆಗಳ ಸಾಮರ್ಥ್ಯದ ಬಗ್ಗೆ ಇನ್ನೂ ಏನಾದರೂ ಅನುಮಾನ ಇದ್ದರೆ ದಯವಿಟ್ಟು ಒಮ್ಮೆ ಪಾಕಿಸ್ತಾನದ ವಾಯು ನೆಲೆಗಳಿಗೆ, ಉಗ್ರರ ಅಡಗುತಾಣಗಳಿಗೆ ಭೇಟಿ ಕೊಟ್ಟು ಬನ್ನಿ. ರಾಷ್ಟ್ರೀಯ ಭದ್ರತೆ ವಿಚಾರ ನಮ್ಮ ಸೇನಾಪಡೆಗಳ ಬಿಡಿ. ಆದರೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ಎಲ್ಲಿದ್ದಾರೆ ಎಂದು ಮೊದಲು ಉತ್ತರಿಸಿ ಪುಣ್ಯ ಕಟ್ಟಿಕೊಳ್ಳಿ. ಫೋರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಸಾಬೀತಾದರೂ ಆ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡರಲ್ಲ, ಬಹುಶಃ ಅವರು ನಿಮಗೆ ಬಹಳ ಬೇಕಾದವರು ಇರಬೇಕು. ಅಂದು ಗೆದ್ದ ರಾಜ್ಯಸಭಾ ಸದಸ್ಯರು ತಮ್ಮ ತಂದೆ ಶ್ರೀ Mallikarjun Kharge ಅವರ ಪರಮಾಪ್ತರು ಕೂಡ. ಆದ್ದರಿಂದ ಆ ದೇಶದ್ರೋಹಿಗಳು ಎಲ್ಲಿದ್ದಾರೆ ಎಂದು ಬಹುಶಃ ತಮಗೆ ಚೆನ್ನಾಗಿ ಗೊತ್ತಿರಲೇಬೇಕು. ಮೊದಲು ಆ ದೇಶದ್ರೋಹಿಗಳನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿ ಅವರನ್ನ ಜೈಲಿಗೆ ಅಟ್ಟಿ. ರಾಷ್ಟ್ರೀಯ ಭದ್ರತೆ ವಿಚಾರದ ಬಗ್ಗೆ ಚರ್ಚೆ ಮಾಡೋದಕ್ಕೆ ಸಂಸತ್ತಿನಲ್ಲಿ ನಿಮ್ಮ ಪಕ್ಷದ ದೊಡ್ಡ ದೊಡ್ಡ ನಾಯಕರು ಇದ್ದಾರೆ. ತಾವು ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದವರನ್ನ ಹುಡುಕಿ, ಅವರ ಹೆಡೆಮುರಿ ಕಟ್ಟಿ.
R. Ashoka16,965 Aufrufe • vor 1 Jahr