
CM of Karnataka
@CMofKarnataka • 1,636,061 subscribers
Official Page of the Chief Minister's Office, Karnataka
Shorts
Videos

“ಕಸ್ತೂರಿ ರಂಗನ್ ವರದಿ ಬಗ್ಗೆ ಎಲ್ಲಾ ವರ್ಗದವರು ಸಲಹೆಗಳನ್ನು ನೀಡಿದ್ದಾರೆ. ಕೆಲವರು ವರದಿಯನ್ನು ತಿರಸ್ಕರಿಸುವಂತೆ ತಿಳಿಸಿದ್ದಾರೆ. ಕೆಲವರು ಉನ್ನತ ಮಟ್ಟದ ಕಮಿಟಿ ಮಾಡಿ ಎಂದಿದ್ದಾರೆ. ಪರಿಸರ ಸೂಕ್ಷ್ಮ ವಲಯ ತೆಗೆದು ಹಾಕುವಂತೆ ಹೇಳಿದ್ದಾರೆ. ಬಫರ್ ಜೋನ್ ಕಾಡಿನ ಗಡಿಗೆ ಮಾತ್ರ ಸೀಮಿತಗೊಳಿಸಬೇಕು ಎಂದಿದ್ದಾರೆ. ಹೀಗೆ ಎಲ್ಲರೂ ತಮ್ಮ ಬದುಕಿನ ಉಳಿವಿಗಾಗಿ ಸಲಹೆಗಳನ್ನು ನೀಡಿದ್ದಾರೆ.” ಸನ್ಮಾನ್ಯ ಶ್ರೀ DK Shivakumar ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
CM of Karnataka19,996 views • 4 days ago

ರೈತರ ಆರ್ಥಿಕ ಸಬಲೀಕರಣವೇ ಸರ್ಕಾರದ ಗುರಿ ರೈತರನ್ನು ಆರ್ಥಿಕವಾಗಿ ಮತ್ತಷ್ಟು ಸ್ವಾವಲಂಬಿಗಳನ್ನಾಗಿ ಮಾಡಲು 'ತೇಗದ ಸಿರಿ' ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಯಡಿ ಉಚಿತವಾಗಿ ನೀಡಲಾಗುವ ತೇಗದ ಸಸಿಗಳನ್ನು ರೈತರು ತಮ್ಮ ಜಮೀನಿನ ಪಕ್ಕದ ರಸ್ತೆ ಬದಿಗಳಲ್ಲಿ ನೆಟ್ಟು ಬೆಳೆಸಬೇಕು. ಭವಿಷ್ಯದಲ್ಲಿ ಮರಗಳು ಕಟಾವಿಗೆ ಬಂದಾಗ ಬರುವ ಲಾಭದಲ್ಲಿ ಬರೋಬ್ಬರಿ ಶೇ. 70ರಷ್ಟು ಪಾಲು ರೈತರಿಗೆ ಹಾಗೂ ಶೇ. 30ರಷ್ಟು ಸರ್ಕಾರಕ್ಕೆ ಸಲ್ಲಲಿದೆ. - ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರು ಮಾತನಾಡಿದ ಕ್ಷಣಗಳು.
CM of Karnataka10,956 views • 3 days ago

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ದೃಢ ಸಂಕಲ್ಪ 2023-24ರಿಂದ 2026-27ರವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಒಟ್ಟು ₹18,000 ಕೋಟಿ ಅನುದಾನ ಘೋಷಿಸಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸಮಾನ ಅವಕಾಶಗಳ ಮೂಲಕ ಸಮೃದ್ಧ ಕರ್ನಾಟಕ ನಿರ್ಮಾಣವೇ ಸರ್ಕಾರದ ಗುರಿಯಾಗಿದೆ.
CM of Karnataka17,927 views • 8 days ago

ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಬೆಂಗಳೂರಿನ ವಿಧಾನಸೌಧಕ್ಕೋ, ಕಚೇರಿಗಳಿಗೋ ಅಲೆದಾಡುವ ದಿನಗಳಿಗೆ ಕರ್ನಾಟಕ ಸರ್ಕಾರವು ತೆರೆ ಎಳೆಯುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಆಶಯದೊಂದಿಗೆ, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ತ್ವರಿತ ಪರಿಹಾರ ನೀಡುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಸೆಪ್ಟೆಂಬರ್ 5 ರಂದು ವಿಜಯನಗರದ ಕೂಡ್ಲಿಗಿಯಲ್ಲಿ ಚಾಲನೆ ಸಿಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಬಳಿಗೆ ನೇರವಾಗಿ ಸರಕಾರ ಬರುವ ಐತಿಹಾಸಿಕ ಹೆಜ್ಜೆ ಇದು.
CM of Karnataka36,222 views • 23 days ago

Karnataka is building India’s first Quantum City at Hesaraghatta, creating a world-class ecosystem for quantum research, innovation and entrepreneurship. With the Karnataka Quantum Mission, we are bringing together researchers, universities, startups and industry to position the state at the forefront of quantum technology. Quantum will shape the future of computing, communication, healthcare and advanced manufacturing, and Karnataka is ready to lead that future.
CM of Karnataka67,199 views • 1 month ago

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ. ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ. - GBDA ಯೋಜನೆ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರ ಸಂದೇಶ
CM of Karnataka63,340 views • 1 month ago

ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಜೊತೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ DK Shivakumar ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ಹೇಳಿದರು. ಸಂಕಷ್ಟದ ಈ ಸಮಯದಲ್ಲಿ ಕನ್ನಡಿಗರ ರಕ್ಷಣೆಗೆ ಸರ್ಕಾರ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
CM of Karnataka30,670 views • 29 days ago

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಅವರೆಲ್ಲರೂ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಲು ಅಗತ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು. ನೇಪಾಳದಿಂದ ದೆಹಲಿಗೆ ತಲುಪುವ ಪ್ರತಿಯೊಬ್ಬ ಕನ್ನಡಿಗರಿಗೂ ಅಗತ್ಯ ವಸತಿ, ಊಟ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವಂತೆ ಹಾಗೂ ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ಅಗತ್ಯ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. Karnataka stands firmly with every Kannadiga! Chief Minister Shri DK Shivakumar spoke directly with Kannadigas stranded in Nepal and assured them that the State Government is doing everything possible to bring them home safely. He has directed officials to make arrangements for their accommodation and necessary support in Delhi, before they continue their journey to Karnataka. We will stand by our people and bring them home safely.
CM of Karnataka22,495 views • 27 days ago

ಒಳ ಮೀಸಲಾತಿ ಜಾರಿಯಾದ ಬೆನ್ನಲ್ಲೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,186 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಶ್ರೀ DK Shivakumar ಅವರ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 32,177 ಹುದ್ದೆಗಳೂ ಭರ್ತಿಯಾಗಲಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಹಾಗೂ ತ್ವರಿತವಾಗಿ ನಡೆಸಲು ಕಾಲಮಿತಿಯನ್ನು ನಿಗದಿ ಪಡಿಸಲಾಗಿದೆ. ಇದರಂತೆ ಮುಂದಿನ 4 ತಿಂಗಳ ಒಳಗಾಗಿ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಒಟ್ಟಾರೆ 6 ತಿಂಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿವೆ. ನಾಡಿನ ಉದ್ಯೋಗಾಕಾಂಕ್ಷಿಗಳು ಅಗತ್ಯ ತಯಾರಿ ನಡೆಸಿ, ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ. ನಿಮ್ಮಿಷ್ಟದ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.
CM of Karnataka58,224 views • 2 months ago

ಲೋಕಭವನದಲ್ಲಿಂದು ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದೃಶ್ಯಗಳು..
CM of Karnataka34,168 views • 1 month ago

ಗಗನದಿಂದ ಕಂಡ ಗುಲಾಬಿ ಸೌಂದರ್ಯ, ವಿಧಾನಸೌಧದಿಂದ ಹಂಪಿಯವರೆಗೆ ಬೆಳಗಿದ ಈ ರಂಗು ಗೃಹಲಕ್ಷ್ಮಿಯರ ಸ್ವಾಭಿಮಾನದ ಪ್ರತೀಕ.. 3 years. 1.2 crore women. ₹76,500+ crore invested. And Karnataka Glowed Pink to celebrate it! Across the state, iconic monuments lit up to celebrate 3 years of Gruha Lakshmi - a powerful tribute to the women who keep Karnataka moving forward. #3YearsOfGruhaLakshmi #Gruhalakshmi #KarnatakaModel
CM of Karnataka17,180 views • 26 days ago

"ಬರದ ಸಂಕಷ್ಟದಲ್ಲಿರುವ ರೈತರೊಂದಿಗೆ ಸರ್ಕಾರವಿದೆ." ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಲವೆಡೆ ಭೀಕರ ಬರದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ DK Shivakumar ಅವರು ಖುದ್ದಾಗಿ ರೈತರ ಜಮೀನುಗಳಿಗೆ ತೆರಳಿ, ಅನ್ನದಾತರ ಸಮಸ್ಯೆಗಳನ್ನು ಆಲಿಸಿ, “ನಿಮ್ಮೊಂದಿಗೆ ಸರ್ಕಾರವಿದೆ” ಎಂದು ಧೈರ್ಯ ತುಂಬಿದರು.
CM of Karnataka13,521 views • 19 days ago

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಜನಪರ ಆಡಳಿತಕ್ಕೆ ಹೊಸ ದಿಕ್ಕು ತೋರುತ್ತಾ, ಸರಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಜನಹಿತವನ್ನೇ ಉಸಿರಾಗಿಸಿಕೊಂಡು, ಸುವರ್ಣ ಯುಗ ಕಂಡ ಐತಿಹಾಸಿಕ ಸಾಮ್ರಾಜ್ಯದ ಹೆಮ್ಮೆಯ ನೆಲ, ಶ್ರೀಕೃಷ್ಣದೇವರಾಯನ ಆಡಳಿತ ವೈಭವ ಸಾರಿದ ಪುಣ್ಯಭೂಮಿ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರು ‘ಪ್ರಜಾಸೇವೆ’ ಇಲಾಖೆಗೆ ಚಾಲನೆ ನೀಡಲಿದ್ದಾರೆ. ಇಲ್ಲೇ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಸ್ಮಾರಕವೂ ಇದ್ದು, ಬಾಪೂರವರ ನೆನಪು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆ ಎಂಬ ಆದರ್ಶಗಳೇ ಸರ್ಕಾರದ ಈ ಜನಪರ ಕಾರ್ಯಕ್ಕೆ ದಾರಿದೀಪವಾಗಿವೆ. ಜನರ ಆಶೋತ್ತರಗಳನ್ನು ಅರಿತು, ಅವರ ಪ್ರತಿಯೊಂದು ಅಹವಾಲಿಗೂ ಸ್ಥಳದಲ್ಲೇ ಪರಿಹಾರ ಕಲ್ಪಿಸುವುದೇ ಸರ್ಕಾರದ ಅಚಲ ಸಂಕಲ್ಪ. ಬಾಗಿಲಿಗೆ ಬಂದಿದೆ ಸರಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ. #PrajaSeve #NimmondigeNaavu
CM of Karnataka13,475 views • 21 days ago

31st Southern Zonal Council Meeting 📍 Mahabalipuram, Tamil Nadu
CM of Karnataka19,986 views • 1 month ago

ಕಚೇರಿ ಅಲೆದಾಟ ತಪ್ಪಿತು; ಜಾತಿ, ನಿವಾಸಿ ಪ್ರಮಾಣಪತ್ರ ಮನೆ ಬಾಗಿಲಿಗೆ ಬಂತು! ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಿಸುವ ಸೇವೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರು, ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರೊಂದಿಗೆ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿ, ಮಾತನಾಡಿದರು.
CM of Karnataka28,368 views • 2 months ago