
DK Shivakumar
@DKShivakumar • 702,409 subscribers
ಕನ್ನಡಿಗ | Chief Minister, Karnataka | Congressman
Shorts
Videos

ಕನ್ನಡದ ಹಬ್ಬಕ್ಕೆ ಕೆಂಪು-ಹಳದಿ ದೀಪಗಳಿಂದ ಮಿನುಗಿದ ನಮ್ಮ ಬೆಂಗಳೂರು 💛❤
DK Shivakumar53,383 görüntüleme • 5 gün önce

ಕನ್ನಡಿಗರ ಹೋರಾಟದ ಫಲ, ಏಕತೆಯ ಸಂಕಲ್ಪದ ಪ್ರತೀಕ–ನಮ್ಮ ಹೆಮ್ಮೆಯ ಅಖಂಡ ಕರ್ನಾಟಕ
DK Shivakumar46,522 görüntüleme • 6 gün önce

ಕನ್ನಡ ರಾಜ್ಯೋತ್ಸವ - ಪ್ರಗತಿಯ ನಿತ್ಯೋತ್ಸವ ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ, ಭಾಷೆ ಮತ್ತು ಬದುಕಿನ ಸೊಬಗನ್ನು ತನ್ನೊಡಲಲ್ಲಿ ಹೊತ್ತಿರುವ ಹೆಮ್ಮೆಯ ನಮ್ಮ ಕನ್ನಡ ನಾಡಿಗೆ ನಮನಗಳು. ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಆತ್ಮಗೌರವ ಮತ್ತು ಬದುಕಿನ ಉಸಿರು. ಕನ್ನಡದ ಕಂಪು ಜಗದಗಲ ಪಸರಿಸಲಿ, ಕನ್ನಡಿಗರ ಹೆಮ್ಮೆ ನಿತ್ಯವೂ ಬೆಳಗಲಿ. ನಾಡು, ನುಡಿ, ನೆಲ, ಜಲದ ರಕ್ಷಣೆಯ ಸಂಕಲ್ಪದೊಂದಿಗೆ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೇ ಜೀವಾಳ, ಕನ್ನಡವೇ ಚಿರಕಾಲ
DK Shivakumar47,509 görüntüleme • 7 gün önce

This is not the voice of one individual, but the voice of a nation united to protect its democracy. #ChaloDilli
DK Shivakumar115,883 görüntüleme • 26 gün önce

ಹುದ್ದೆ ಏನೇ ಇರಲಿ, ಜನರ ಜೊತೆಗಿನ ಈ ಆತ್ಮೀಯತೆ ಯಾವತ್ತೂ ಬದಲಾಗದು, ನಿಮ್ಮ ಮಾತು ಕೇಳುವುದು ನನ್ನ ಕರ್ತವ್ಯ, ನಿಮ್ಮ ಜೊತೆ ನಿಲ್ಲುವುದು ನನ್ನ ಸಂಕಲ್ಪ. ಮುಂಜಾನೆಯ ಮಾರುಕಟ್ಟೆಯಲ್ಲಿ ಶ್ರಮಜೀವಿ ಬಂಧುಗಳ ಆತ್ಮೀಯ ಮಾತುಕತೆ, ನಿಮ್ಮ ಪ್ರೀತಿಯ ನಡುವೆ ಒಟ್ಟಿಗೆ ಸವಿದ ಬಿಸಿ ಇಡ್ಲಿ, ಕುಡಿದ ಒಂದು ಲೋಟ ಕಾಫಿ. ಬೆವರ ಹನಿಯನ್ನೇ ಬಂಡವಾಳವಾಗಿಸಿ ದುಡಿಯುವ ನಿಮ್ಮ ಈ ಮುಖಗಳಲ್ಲೇ ನನಗೆ ಕಾಯಕವೇ ಕೈಲಾಸದ ನಿಜವಾದ ದರ್ಶನ..
DK Shivakumar157,629 görüntüleme • 2 ay önce

ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು. ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು, ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನನ್ನ ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನೆಲೆಸಿರುವ ಅವರು, ಭಾರತೀಯ ರಾಜಕಾರಣದ ಧೀಮಂತ ನಾಯಕ. ಜನಪರ ಯೋಜನೆಗಳಿಂದ ಹಿಡಿದು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಸುಮಾರು ಐವತ್ತು ವರ್ಷಗಳ ಅವರ ಅಗಾಧ ರಾಜಕೀಯ ಅನುಭವ, ಸಾಮಾಜಿಕ ಕಳಕಳಿ ಮತ್ತು ಜನಪರ ಯೋಜನೆಗಳು ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ. ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ. ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ. Siddaramaiah
DK Shivakumar374,811 görüntüleme • 5 ay önce

Spoke to Karnataka’s pride, M.R. Poovamma, and congratulated her on winning a Gold in the women’s 4x400m relay and a Silver in the mixed 4x400m relay at the Asian Games 2026. As someone who has always followed athletics closely, I know the dedication and hard work it takes to compete at this level. Poovamma has made Karnataka proud once again, and our Government will stand firmly behind her, our Asian Games champions and every young athlete who is working hard to represent Karnataka and India, supporting them in every possible way. Their achievements inspire a new generation to dream bigger and bring greater glory to Karnataka and India.
DK Shivakumar77,289 görüntüleme • 1 ay önce

ಇಂದು ಕೂಡ್ಲಿಗಿಯಲ್ಲಿ ಆಯೋಜಿಸಲಾಗಿದ್ದ 'ಪ್ರಜಾಸೇವೆ ಇಲಾಖೆ'ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಹೆಣ್ಣುಮಗಳೊಬ್ಬಳು ಅಭಿಮಾನದಿಂದ ಕೈಯಾರೆ ಬಿಡಿಸಿದ ನನ್ನ ಚಿತ್ರವನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದಳು. ಇದೇ ವೇಳೆ ಪುಟ್ಟ ಮಗುವೊಂದು ಕೈಗಿತ್ತ ಹೂವು ನನ್ನ ಮೇಲಿಟ್ಟ ನಂಬಿಕೆಯ ಸಂಕೇತ; ಜೊತೆಗೆ ಅವಳಂತಹ ಅನೇಕ ಪುಟಾಣಿಗಳ ಭವಿಷ್ಯವನ್ನು ಕಾಯುವ ಹೊಣೆಗಾರಿಕೆ ನನ್ನ ಮೇಲಿದೆ ಎನ್ನುವ ಎಚ್ಚರಿಕೆ. ಒಬ್ಬ ಪ್ರಜಾಸೇವಕನಿಗೆ ಜನರ ಈ ನಿಷ್ಕಲ್ಮಶ ಪ್ರೀತಿಗಿಂತ ಮಿಗಿಲಾದ ಉಡುಗೊರೆ ಇನ್ನೇನಿದೆ?
DK Shivakumar83,931 görüntüleme • 2 ay önce

ಓಟದ ಭರದಲ್ಲಿ ಸಿಡಿದೇಳುವ ಮಣ್ಣಿನ ಕಂಪು, ದಿಗ್ವಿಜಯದತ್ತ ಮುನ್ನುಗ್ಗುವ ಕೋಣಗಳ ವೀರಾವೇಶ! ಕಂಬಳವೆಂಬ ಕರಾವಳಿಯ ಈ ಸಾಂಸ್ಕೃತಿಕ ಸಿರಿ ಮೈಸೂರು ದಸರಾದ ಅಂಗಳದಲ್ಲಿ ಮೇಳೈಸಿದಾಗ, ಆ ರೋಮಾಂಚನವನ್ನು ಕೇವಲ ಕಣ್ಣಲ್ಲಷ್ಟೇ ಅಲ್ಲ, ನನ್ನ ಮೊಬೈಲ್ನಲ್ಲೂ ಸೆರೆಹಿಡಿಯುವ ಹಂಬಲವಾಯಿತು. ನಮ್ಮ ಈ ಅಪ್ಪಟ ದೇಸಿ ಸೊಗಡನ್ನು ಕಣ್ತುಂಬಿಕೊಳ್ಳುವಾಗ ಸಿಕ್ಕ ಆನಂದವೇ ಅನನ್ಯ. ನಾನೇ ಸೆರೆಹಿಡಿದ ಈ ಅದ್ಭುತ ದೃಶ್ಯಗಳನ್ನು ನೀವೂ ಒಮ್ಮೆ ನೋಡಿ.
DK Shivakumar28,605 görüntüleme • 20 gün önce

Ee Sala Cup Namde! ♥️🏆 18 years of grit. Every prayer, every cheer, every heartbreak - it all leads to today. This is more than a match. Our moment. Our Cup. Wishing Royal Challengers Bengaluru the very best - Karnataka is with you! #PlayBold #ನಮ್ಮRCB #IPL2025
DK Shivakumar492,459 görüntüleme • 1 yıl önce

The right to vote is the foundation of our democracy, and protecting every genuine vote is our bound duty. I appeal to all voters, BLAs, BLA 1s, BLA 2s and our leaders to stay alert and check whether Form 7 applications seeking deletion of votes have been submitted in your Assembly segment or booth. I have already sought the data from the police authorities, Deputy Commissioners and the State Election Officer. Please share any such information with me by 12 noon tomorrow so that necessary action can be taken. Let us ensure that every genuine voter remains on the electoral roll. #SIR
DK Shivakumar43,285 görüntüleme • 1 ay önce

Congress party's victory is Karnataka's victory- a hard earned one! Our guarantees for our people are the guiding force of our vision for the state and we shall get down to implementation right away. This is a huge mandate for our leaders and workers who have worked hard for this win. My heartfelt congratulations to all!
DK Shivakumar902,855 görüntüleme • 3 yıl önce

ನಮಸ್ಕಾರ ಕುಡ್ಲ! ಕರಾವಳಿಯ ಸರ್ವತೋಮುಖ ಬೆಳವಣಿಗೆ ಹಾಗೂ ಸ್ಥಳೀಯ ಜನರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರವೇ ನೇರವಾಗಿ ಮಂಗಳೂರಿಗೆ ಬರುತ್ತಿದೆ. ಇಂದು ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯು ಕರಾವಳಿಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಹೊಸ ಮುನ್ನುಡಿ ಬರೆಯಲಿದೆ. #CabinetInMangaluru | #ದೃಢಕರ್ನಾಟಕದಸಂಕಲ್ಪ
DK Shivakumar50,324 görüntüleme • 1 ay önce

ಕುಮಾರಸ್ವಾಮಿ ಹತಾಶರಾಗಿದ್ದಾರೆ ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನವದೆಹಲಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಿಂದ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಅವರಿಗೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು? ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು. ಜೊತೆಗೆ ಇವರೂ ಸಹ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛೀಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ. - ಕುಮಾರಸ್ವಾಮಿ ಅವರು ಐಟಿ ಅಧಿಕಾರಿಯೇ? ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ? ಕಾನೂನಿನಲ್ಲಿ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇನೆ, ತಪ್ಪೇನಿದೆ? ಕುಮಾರಸ್ವಾಮಿ ಅವರು ಏನಾದರೂ ಆದಾಯ ತೆರಿಗೆ ಅಧಿಕಾರಿಯೇ? ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ. ಇವರುಗಳು ಮಾತ್ರ ಯಾವುದೋ ಊರಿನಿಂದ ಬಂದು ಇಲ್ಲೆಲ್ಲಾ ಆಸ್ತಿಗಳನ್ನು ತೆಗೆದುಕೊಳ್ಳಬಹುದಾ? ಬಿಎಂಐಸಿಎಪಿಎ, ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ? ಆಸ್ತಿಗಳನ್ನು ಯಾರ್ಯಾರು ತೆಗೆದುಕೊಂಡಿದ್ದಾರೆ? ಯಾಕೆ ಇವರ ಆಸ್ತಿಗಳೆಲ್ಲಾ ವ್ಯಾಪ್ತಿಯಲ್ಲಿ, ಬಿಡದಿ ಟೌನ್ಶಿಪ್ ಯೋಜನೆಯೊಳಗೆ ಹೇಗೆ ಆಸ್ತಿ ಬಂದಿತು? ಕುಮಾರಸ್ವಾಮಿ ಅವರು ಏನಾದರೂ ಮಾಡಿಕೊಳ್ಳಲಿ, ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಆಸ್ತಿ ಇದೆ, ನನ್ನ ಮಕ್ಕಳಿಗೆ ಇನ್ನೂ ತೆಗೆದುಕೊಳ್ಳುವ ಶಕ್ತಿ ಇದ್ದರೆ ತೆಗೆದುಕೊಳ್ಳುತ್ತಾರೆ. ಕಾನೂನಿನಲ್ಲಿ ಅವಕಾಶ ಇದೆ, ಖರೀದಿ ಮಾಡುವ ಸಾಮರ್ಥ್ಯವಿದೆ, ಬದುಕುತ್ತಾರೆ. - ಕದ್ದು ಏನನ್ನೂ ಮಾಡಿಕೊಂಡಿಲ್ಲ ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡುವ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನು ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ. ಕುಮಾರಸ್ವಾಮಿ ಅವರದ್ದು ಏನೇನಿದೆ ಎಂದು ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲವೇ? ಇನ್ನೆಷ್ಟು ಬಾರಿ ಕೊಡುತ್ತಾರೆ? ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ. - ಗೊಡ್ಡು ಬೆದರಿಕೆಗೆಲ್ಲಾ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ 2007 ರಲ್ಲಿ ಅವರಿಗೆ ಅಧಿಕಾರವಿತ್ತಲ್ಲವೇ, ಇವರೇ ಹರಾಜಿನಲ್ಲಿ ನಿಖಿಲ್ ಗಾಂಧಿಗೆ ಕೊಟ್ಟಿದ್ದರಲ್ಲವೇ, ಯಾಕೆ ಮಾಡಲು ಆಗಿಲ್ಲ? ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ಬಂದ್ ಮಾಡಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ. ಈ ಗೊಡ್ಡು ಬೆದರಿಕೆಗೆಲ್ಲಾ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ. ಈ ನಾಟಕ, ಡ್ರಾಮಾ, ಫಿಲಾಸಫಿ, ಬ್ಲ್ಯಾಕ್ಮೇಲ್ ಎಲ್ಲಾ ಬೇಕಾದಷ್ಟು ನೋಡಿದ್ದೇನೆ. ಇವುಗಳಿಗೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ಕೆಲಸ ಮಾಡೋಣ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ನಾಳೆಯೂ ಹೇಳುತ್ತೇನೆ. - ಬ್ಲ್ಯಾಕ್ಮೇಲ್ ಹಾಗೂ ಫೋನ್ ಟ್ಯಾಪಿಂಗ್ ತಂತ್ರಕ್ಕೆ ಹೆದರುವುದಿಲ್ಲ ಪಾರ್ಟ್ 1, 2, 3, 4 ಸ್ಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅವರ ಹತ್ತಿರ ಇರುವುದೆಲ್ಲ ಗೊತ್ತಿದೆ. ಚೆನ್ನಿಗಪ್ಪನ ಕಾಲದಿಂದಲೂ ಗೊತ್ತಿದೆ. ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಅನ್ನೇ ಟ್ಯಾಪ್ ಮಾಡಿಸಿದವರು, ಅವರನ್ನೇ ಬಿಟ್ಟಿಲ್ಲ, ಇನ್ನು ನನ್ನನ್ನು ಬಿಡುತ್ತಾರೆಯೇ? ಹಾಗೆಂದು ಭಾವಿಸಿದರೆ ನಮ್ಮಂಥ ಮುಟ್ಟಾಳರು ಯಾರೂ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಹೆದರಲಿಲ್ಲ, ಈಗ ಹೆದರುತ್ತೇನೆಯೇ? ನನ್ನನ್ನು ದೊಡ್ಡ ಬೆದರಿಕೆ ಹಾಕಿ ಹೆದರಿಸುವ ಅಥವಾ ಬ್ಲ್ಯಾಕ್ಮೇಲ್ ಮಾಡುವ ಜಾಯಮಾನ ನನ್ನದಲ್ಲ. - ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು ನಮ್ಮನ್ನು ಬಿಡುತ್ತಾರೆಯೇ? ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಾವೇನೂ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿಲ್ಲ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ 'ಅಸೂಯೆ'ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ.
DK Shivakumar38,715 görüntüleme • 1 ay önce

ಮೈಸೂರು ದಸರಾ… ಕರುನಾಡಿನ ಹೆಮ್ಮೆ, ಕನ್ನಡಿಗರ ಸಂಭ್ರಮ ನಮ್ಮ ಮಣ್ಣಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ವೈಭವದ ಸಂಗಮವಾಗಿರುವ ನಾಡಹಬ್ಬ ಮೈಸೂರು ದಸರಾಗೆ, ನಾಡಿನ ಸಮಸ್ತ ಕನ್ನಡಿಗರಿಗೂ ಹಾಗೂ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೂ ಆತ್ಮೀಯ ಆಹ್ವಾನ. ಐತಿಹಾಸಿಕ ಜಂಬೂಸವಾರಿಯ ಗಾಂಭೀರ್ಯದಿಂದ ಜಾನಪದ ಕಲೆಯ ಸೊಗಡಿನವರೆಗೆ, ಸಂಗೀತದ ನಾದದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೆ ಮೈಸೂರಿನ ಪ್ರತಿಯೊಂದು ಹೆಜ್ಜೆಯಲ್ಲೂ ಸಂಭ್ರಮವೇ ಮನೆ ಮಾಡಿದೆ. ನಮ್ಮ ಶ್ರೀಮಂತ ಪರಂಪರೆಯ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ, ನಾಡಹಬ್ಬದ ವೈಭವವನ್ನು ಕಣ್ತುಂಬಿಕೊಳ್ಳಿ.
DK Shivakumar20,141 görüntüleme • 19 gün önce