M B Patil's banner
M B Patil's profile picture

M B Patil

@MBPatil116,744 subscribers

Minister for Commerce & Industries, Infrastructure GoK | Educationist-Engineer-Basava Literature Enthusiast

Shorts

ಕಾಡಿದ್ದರೆ ಮಳೆ, ಮಳೆಯಿದ್ದರೆ ಕಾಡು! ಒಂದಕ್ಕೊಂದು ಬಿಡಿಸಲಾಗದ ಪ್ರಕೃತಿಯ ಅವಿಭಾಜ್ಯ ಸಂಬಂಧ! ವಿಜಯಪುರ ಸಮೀಪದ ಕರಾಡದೊಡ್ಡಿಯ ನೆಲವನ್ನು ಒಣ ನೆಲವೆಂದು ಬಿಡದೆ, ಕಾಡು ಕಟ್ಟುವ ಕಾರ್ಯ ಮಾಡಿದೆವು. ಅದರ ಪ್ರತಿಫಲವೇ ಇಂದು ಸುರಿಯುತ್ತಿರುವ ಈ ಭಾರಿ ಮಳೆ! ಇದು ಕೇವಲ ನೀರ ಹನಿಗಳಲ್ಲ; ನಮ್ಮ ಪಾಲಿನ ಜೀವಜಲ #ಕರಾಡದೊಡ್ಡಿ #ಜೀವಜಲ

ಕಾಡಿದ್ದರೆ ಮಳೆ, ಮಳೆಯಿದ್ದರೆ ಕಾಡು! ಒಂದಕ್ಕೊಂದು ಬಿಡಿಸಲಾಗದ ಪ್ರಕೃತಿಯ ಅವಿಭಾಜ್ಯ ಸಂಬಂಧ! ವಿಜಯಪುರ ಸಮೀಪದ ಕರಾಡದೊಡ್ಡಿಯ ನೆಲವನ್ನು ಒಣ ನೆಲವೆಂದು ಬಿಡದೆ, ಕಾಡು ಕಟ್ಟುವ ಕಾರ್ಯ ಮಾಡಿದೆವು. ಅದರ ಪ್ರತಿಫಲವೇ ಇಂದು ಸುರಿಯುತ್ತಿರುವ ಈ ಭಾರಿ ಮಳೆ! ಇದು ಕೇವಲ ನೀರ ಹನಿಗಳಲ್ಲ; ನಮ್ಮ ಪಾಲಿನ ಜೀವಜಲ #ಕರಾಡದೊಡ್ಡಿ #ಜೀವಜಲ

16,016 views

Videos

MBPatil's profile picture

ಯುವ ಮನಸುಗಳ ಜೊತೆ ಬಸವನಾಡಿನ ಅಭಿವೃದ್ಧಿ ಕುರಿತ ಅರ್ಥಪೂರ್ಣ ಸಂವಾದ... ಇತ್ತೀಚೆಗೆ ಕೆಲವು ಉತ್ಸಾಹಿ ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಸಂವಾದ ನಡೆಸಿದೆ. ಈ ಭೇಟಿಯಲ್ಲಿ ವಿಜಯಪುರದ ಸಕಾರಾತ್ಮಕ ಬದಲಾವಣೆಗಳು, ನೀರಾವರಿ, ಕೈಗಾರಿಕಾ ಪ್ರಗತಿ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ನನ್ನ ಮುಂದಿನ ಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದೆ. 2013- 2018ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ, ನಾನು ಜಲಸಂಪನ್ಮೂಲ ಸಚಿವನಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ಐತಿಹಾಸಿಕ ನೀರಾವರಿ ಯೋಜನೆಗಳು. ಜಿಲ್ಲೆಯ ಪರಿಸರ ಕಾಳಜಿಯ ಸಂಕೇತವಾದ 'ಕೋಟಿ ವೃಕ್ಷ ಅಭಿಯಾನ' ಸೇರಿದಂತೆ ಹಲವು ಸಂಗತಿಗಳ ಕಡೆಗೆ ಅವರು ತೋರಿದ ಆಸಕ್ತಿ ತಿಳಿದುಕೊಳ್ಳಬೇಕೆಂಬ ಕುತೂಹಲ ನನಗೆ ಸಂತಸ ತಂದಿದೆ. ವಿದ್ಯಾರ್ಥಿಗಳೊಂದಿಗೆ ನಾನು ಹಂಚಿಕೊಂಡ ಪ್ರಮುಖ ಮಾಹಿತಿಯ ವೀಡಿಯೊ ಇಲ್ಲಿದೆ, ವೀಕ್ಷಿಸಿ... ಈ ಸಂವಾದದ ಮುಂದಿನ ಭಾಗ ಹಾಗೂ ಮತ್ತಷ್ಟು ಆಸಕ್ತಿದಾಯಕ ಮಾಹಿತಿಯುಳ್ಳ ವೀಡಿಯೊವನ್ನು ಮುಂದಿನ ಭಾನುವಾರ ಬೆಳಿಗ್ಗೆ 8:00 ಗಂಟೆಗೆ ಹಂಚಿಕೊಳ್ಳಲಿದ್ದೇನೆ.

M B Patil

11,003 views • 15 days ago

MBPatil's profile picture

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಕೆಲವೇ ದಿನಗಳಲ್ಲಿ ಎಎಐ ವರದಿ ಲಭ್ಯ ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ #ನಮ್ಮಸರಕಾರ ಗುರುತಿಸಿರುವ 3 ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (#AAI)ದ ಉನ್ನತ ಮಟ್ಟದ ತಂಡ ಪರಿಶೀಲನೆ ನಡೆಸಿದ್ದು, ಕೆಲವೇ ದಿನಗಳಲ್ಲಿ ವರದಿಯನ್ನು ನೀಡಲಿದೆ. ಅವರು ನೀಡುವ ಅಭಿಪ್ರಾಯದ ಆಧಾರದ ಮೇಲೆ ಪರಿಣಿತರ ತಂಡಕ್ಕೆ ಕಾರ್ಯಗತ ಗೊಳಿಸಲು ಸಾಧ್ಯತಾ ವರದಿ (Feasibility Report) ಸಿದ್ದ ಪಡಿಸುವಂತೆ ತಿಳಿಸಲಾಗುವುದು. ಅವರು ನೀಡುವ ಅಭಿಪ್ರಾಯವನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ, ಅನುಮೋದನೆ ಪಡೆಯಲಾಗುವುದು. ಒಂದಂತು ಖಚಿತ-ಬೆಂಗಳೂರು ಸಮೀಪದ 2ನೇ ಅಂ.ರಾ. ವಿಮಾನ ನಿಲ್ದಾಣ, ಅತ್ಯಂತ ಸಮರ್ಥ ಮತ್ತು ಸೂಕ್ತ ಸ್ಥಳದಲ್ಲೇ ನಿರ್ಮಿಸುತ್ತೇವೆ.

M B Patil

64,424 views • 9 months ago

MBPatil's profile picture

ರೈತರಿಗೆ ಸೇರಿದ ಜಮೀನಲ್ಲಿ ಒಂದಿಂಚು ಕೂಡ ಯಾರ ವಶವೂ ಆಗಲು ಬಿಡುವುದಿಲ್ಲ! ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಅದರಲ್ಲಿ 10 ಎಕರೆ 14 ಗುಂಟೆ ಖಬರಸ್ತಾನ ಇದೆ. ಉಳಿದದ್ದು ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ ಹಾಗೂ ಈ ಭೂಮಿಯು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಯಾವುದೇ ರೈತರ ಖಾಸಗಿ ಜಮೀನು ಒಳಪಟ್ಟಿಲ್ಲ ಎಂಬುದನ್ನು ಗಮನಿಸಬೇಕು. ಹಜರತ್ ಪೀರ ದಸ್ತಿಗೀರ ಸಾಬ್ ಮೊಹಮ್ಮದ ಚಿಂಗ್ ಸಿಯಾ ತಖಿಯಾ ದರ್ಗಾ ವಿಜಯಪುರ ಮಹಾಲಬಾಗಯತ ಸೇರಿದ ಆಸ್ತಿಯಾಗಿದ್ದು, ಕೆಳಗಡೆ ತಪ್ಪಾಗಿ ಹೊನವಾಡ ಎಂದು ಸೇರಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ಯಾವ ರೈತರಿಗೂ ವಕ್ಫ ಸಮಿತಿ ಅಥವಾ ಸರ್ಕಾರದ ಇಲಾಖೆಯಿಂದ ಯಾವುದೇ ನೋಟಿಸಗಳು ಬಂದಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಹಲವು ರೈತರಿಗೆ ವಕ್ಫ್ ಆಸ್ತಿ ನೋಟಿಸು ಬಂದಿದೆ ಎಂಬ ದೂರುಗಳಿದ್ದು, ವಕ್ಫ್ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಎಲ್ಲ ದಾಖಲೆಗಳನ್ನು ಕೂಲಕುಂಷವಾಗಿ ಪರಿಶೀಲಿಸುತ್ತಾರೆ. ಒಂದೇ ಒಂದು ಇಂಚು ರೈತರ ಜಾಗವು ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ ಆಸ್ತಿ ಎಂದು ಸೇರಿಸಲಾಗುವುದಿಲ್ಲ. ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ, ಎಲ್ಲ ಗೊಂದಲಗಳಿಗೆ ಉತ್ತರ ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರಾಗಲಿ ಮತ್ತೊಬ್ಬರಾಗಲಿ ರಾಜಕಾರಣ ಮಾಡಿ ಜನಸಾಮಾನ್ಯರಲ್ಲಿ ಇಲ್ಲದ ಗೊಂದಲ, ಆತಂಕ ಮೂಡಿಸುವುದು ಬೇಡ. Tejasvi Surya B Z Zameer Ahmed Khan

M B Patil

84,866 views • 1 year ago

MBPatil's profile picture

“Success has many fathers, but failure is an orphan” - John F. Kennedy ನಿರಂತರ ಸಭೆಗಳು - ತಾಂತ್ರಿಕ ಚರ್ಚೆ - ಒತ್ತಾಯದ ಫಲ : ಬೆಂಗಳೂರು-ವಿಜಯಪುರ ಬೈಪಾಸ್ ರೈಲು ಸಂಚಾರ ಆರಂಭಕ್ಕೆ ಮುನ್ನುಡಿ ಬೆಂಗಳೂರು-ವಿಜಯಪುರ ನಡುವಿನ ರೈಲು ಸಂಚಾರಕ್ಕೆ 14-15 ಗಂಟೆಗಳ ಕಾಲ ಹಿಡಿಯುತ್ತಿದೆ. ಇದರಿಂದಾಗಿ, ಎರಡೂ ನಗರಗಳ ನಡುವೆ ಓಡಾಡುವ ಸಾರ್ವಜನಿಕರಿಗೆ ಸಮಯ ವ್ಯರ್ಥವಾಗುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ರೈಲ್ವೆ ಅಧಿಕಾರಿಗಳೊಂದಿಗೆ, ಸಚಿವರೊಂದಿಗೆ ಹಲವು ಸಭೆಗಳನ್ನು ನಡೆಸಿ, ಗದಗ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಒತ್ತಾಯಿಸಿ ರೂಪುರೇಷೆ ಸಿದ್ಧಪಡಿಸಲಾಯಿತು. ಈ ಬಗ್ಗೆ ಕೇಂದ್ರ ಸಚಿವರಿಗೂ ಮನವಿ ನೀಡಿ ಒತ್ತಾಯಿಸಿದ್ದೆ. ಈ ಎಲ್ಲಾ ಪ್ರಯತ್ನಗಳ ಫಲವೆಂಬಂತೆ 2 ದಿನಗಳ ಹಿಂದೆ ಬೆಂಗಳೂರು-ವಿಜಯಪುರದ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗವಾಗಿ ವಿಶೇಷ ರೈಲು ಓಡಿಸಿರುವುದು ಸ್ವಾಗತಾರ್ಹ. ನಮ್ಮ ಪ್ರಯತ್ನಗಳಿಗೆ ಸಾರ್ಥಕ ಫಲಿತಾಂಶ - ಸಾರ್ವಜನಿಕರಿಗೆ ಪ್ರಯಾಣದ ಅವಧಿ ಕಡಿಮೆಯಾಗಿದ್ದು ಸಂತಸದ ವಿಷಯ. ನಡೆದ ಪ್ರಮುಖ ಸಭೆಗಳು: • 2024 ಮಾರ್ಚ್ 15 : ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ • 2024 ಸೆಪ್ಟೆಂಬರ್ 9 : ಕೇಂದ್ರ ರೈಲ್ವೆ (ರಾಜ್ಯ ಖಾತೆ) ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ಮಹತ್ವದ ಸಭೆ • 2025 ಏಪ್ರಿಲ್ 16, ಮೇ 31, ಡಿಸೆಂಬರ್ 3 : ಮುಂದುವರಿದ ಸಭೆಗಳು V. Somanna #ಕಾಯಕವೇಕೈಲಾಸ #ಸತ್ಯಮೇವಜಯತೇ

M B Patil

29,492 views • 7 months ago