ನಾರಾಯಣಗೌಡ್ರು.ಟಿ.ಎ | ‌Narayanagowdru T.A.'s banner
ನಾರಾಯಣಗೌಡ್ರು.ಟಿ.ಎ | ‌Narayanagowdru T.A.'s profile picture

ನಾರಾಯಣಗೌಡ್ರು.ಟಿ.ಎ | ‌Narayanagowdru T.A.

@narayanagowdru18,043 subscribers

ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Videos

narayanagowdru's profile picture

ಯಾರೋ ಒಬ್ಬರು ಪುಣ್ಯಾತ್ಮರು ಬೆಳಗಾವಿಗೆ ಯಾರೂ ಬರಬೇಡಿ ಎಂದು ಅಪ್ಪಣೆ ಮಾಡಿದ್ದರು. ಬೆಳಗಾವಿಗೆ ನಾನು ಯಾಕೆ ಬರಬೇಕಾಯಿತು ಎಂದು ಬೆಳಗಾವಿಯ ಎಲ್ಲ ಸ್ವಾಭಿಮಾನಿ ಕನ್ನಡಿಗರಿಗೆ ಗೊತ್ತು. ಕರ್ನಾಟಕದ ರಕ್ಷಣೆಯ ಕೀಲಿಕೈ ಯಾರಿಗೆ ಕೊಟ್ಟು ವಿಧಾನಸಭೆಗೆ ಕಳಿಸಿದ್ದೇವೋ ಅವರು ಕನ್ನಡದ ನೆಲಕ್ಕೆ ನಿಯತ್ತಾಗಿದ್ದರೆ ಯಾವುದೇ ಕನ್ನಡಪರ ಸಂಘಟನೆಗೂ ಏನೂ ಕೆಲಸ ಇರುತ್ತಿರಲಿಲ್ಲ. ನಾನು ಬೆಳಗಾವಿಗೆ ಹೋಗುವ ನಿರ್ಧಾರ ಮಾಡುವ ಮುನ್ನವೇ ಅಲ್ಲಿನ ಸ್ವಾಭಿಮಾನಿ ಕನ್ನಡಿಗರು ನಾರಾಯಣಗೌಡರು ಬೆಳಗಾವಿಗೆ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದರು. ಬೆಳಗಾವಿಗೆ ಕಾಲಿಡುತ್ತಿದ್ದಂತೆ ಮಾಧ್ಯಮ ಮಿತ್ರರು ವಿಮಾನ ನಿಲ್ದಾಣದಲ್ಲಿ ತುಂಬಿ ನಿಂತಿದ್ದರು. ನಾನು ಬಹಳ ಸ್ಪಷ್ಟವಾಗಿ ಹೇಳಿದೆ, ಬಸ್ ನಿರ್ವಾಹಕ ಮಹದೇವಪ್ಪ ಅವರ ಮೇಲಿನ ಪ್ರಕರಣ ರದ್ದಾಗಬೇಕು, ಪೋಕ್ಸೋ ಕೇಸು ದಾಖಲಿಸಿದ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕು. ನಾನು ಬೆಳಗಾವಿಗೆ ಹೋಗುವ ಮುನ್ನವೇ ಹೇಳಿದ್ದೆ, ನಾನು ಅಲ್ಲಿಗೆ ಬಂದರೆ ಖಾಲಿ ಕೈಯಲ್ಲಿ ಹೋಗುವ ಪ್ರಶ್ನೆಯೇ ಇಲ್ಲ ಎಂದು. ಆಸ್ಪತ್ರೆಯಲ್ಲಿ ಮಹದೇವಪ್ಪ ಅವರನ್ನು ಭೇಟಿ ಮಾಡಿದೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿ ಸಂಕಟವಾಯಿತು. ಅಧೀರರಾಗಬೇಡಿ, ಇಡೀ ಕರ್ನಾಟಕದ ಜನತೆ ನಿಮ್ಮೊಂದಿಗಿದೆ ಎಂದು ಧೈರ್ಯ ಹೇಳಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೆಂಗಳೂರಿಗೆ ಬನ್ನಿ ಎಂದು ಹೇಳಿದೆ. ನಿಮ್ಮ ಚಿಕಿತ್ಸೆಯ ಖರ್ಚು ನನ್ನದು ಎಂದು ಹೇಳಿದೆ. ಮಹಾದೇವಪ್ಪ ಆದ ಘಟನೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. ನಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಮೆರವಣಿಗೆಯಲ್ಲಿ ತೆರಳಿದಾಗ ನನ್ನೊಂದಿಗೆ ಸಾವಿರಾರು ಕರವೇ ಕಾರ್ಯಕರ್ತರು ಕೂಡಿಕೊಂಡಿದ್ದರು. ಮಹದೇವಪ್ಪ ಅವರ ಕಣ್ಣಲ್ಲಿ ನೀರು ತರಿಸಿದವರಿಗೆ ನಾನು ಎಚ್ಚರಿಕೆ‌ ನೀಡಿದೆ, ಇದು ಮುಂದುವರೆದರೆ ನಿಮ್ಮ ಕಣ್ಣುಗಳಲ್ಲಿ ರಕ್ತ ಬರುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದೆ. ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಅವರು ಅಲ್ಲಿಗೇ ಬಂದರು. ನಾನು ಅವರನ್ನು ಬಲ್ಲೆ. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವೆ ಎಂದು‌ ಅವರು ಹೇಳಿದರು. ಮಹದೇವಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿರುವುದರಿಂದ ಅದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರಕರಣ ದಾಖಲಿಸಿದ ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಿರುವುದಾಗಿ ಹೇಳಿದರು. ಅವರ ಮಾತುಗಳಲ್ಲಿ ಪ್ರಾಮಾಣಿಕತೆ ಇತ್ತು. ಚೆನ್ನಮ್ಮ ಅವರ ಪ್ರತಿಮೆ ಮುಂಭಾಗ ನಿಂತು ಯಾರು ಯಾರಿಗೆ ಏನೇನು ಸಂದೇಶ ನೀಡಬೇಕೋ ನೀಡಿದ್ದೇನೆ. ಭಾಷೆಯ ಹೆಸರಲ್ಲಿ ದಾದಾಗಿರಿ ನಡೆಸುವ ಮರಾಠಿ ಪುಂಡರಿಗೆ, ಅವರ ದೌರ್ಜನ್ಯ ಗಳನ್ನು ಓಟ್ ಬ್ಯಾಂಕ್ ಗಾಗಿ ಸಹಿಸಿಕೊಳ್ಳುವ ಜನಪ್ರತಿನಿಧಿಗಳಿಗೆ ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಒಂದೇ‌ ದಿನದಲ್ಲಿ ಕೊಟ್ಬ ಕರೆಗೆ ಬೆಳಗಾವಿ ಜಿಲ್ಲೆಯ ನನ್ನ ಸಾವಿರಾರು ಕಾರ್ಯಕರ್ತರು, ಬೆಳಗಾವಿಯ ಸ್ವಾಭಿಮಾನಿ ಕನ್ನಡಿಗರು ಅಲ್ಲಿ ನೆರೆದಿದ್ದರು. ಅವರೆಲ್ಲರಿಗೂ ಶರಣು. ನಿಮ್ಮ ಕಾಳಜಿಯಿಂದ ಬೆಳಗಾವಿ ನಮ್ಮ ಪಾಲಿಗೆ ಉಳಿದಿದೆ. - ಟಿ.ಎ.ನಾರಾಯಣಗೌಡ ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ನಾರಾಯಣಗೌಡ್ರು.ಟಿ.ಎ | ‌Narayanagowdru T.A.

35,774 Aufrufe • vor 1 Jahr

narayanagowdru's profile picture

ಕೆಪಿಎಸ್ಸಿ ಅನ್ಯಾಯದ ವಿರುದ್ಧ ಹೋರಾಟ ರೂಪಿಸಲು ಇಂದು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ‌ ಸಭೆ ಏರ್ಪಡಿಸಲಾಗಿತ್ತು. ಹೋರಾಟವನ್ನು ತೀವ್ರಗೊಳಿಸಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಯಿತು‌. ಈಗ ನಾವು ಮತ್ತೊಂದು ಹೋರಾಟಕ್ಕೆ ಸಜ್ಜಾಗೋಣ. ಸೋಮವಾರದಿಂದಲೇ ಆಹೋರಾತ್ರಿ ಧರಣಿ ಆರಂಭಿಸೋಣ.‌ ಸರ್ಕಾರ ಕೆಎಎಸ್ ಪರೀಕ್ಷೆ ಮರು ಅಧಿಸೂಚನೆ ಹೊರಡಿಸುವವರೆಗೆ ನಮ್ಮ ಹೋರಾಟ ನಿಲ್ಲಿಸುವುದು ಬೇಡ. ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳು ಸೋಮವಾರ ಹೇಳಿಕೆ ನೀಡುತ್ತಾರೆ ಎಂದು ಕಾನೂನು ಸಚಿವರಾದ ಎಚ್.ಕೆ.ಪಾಟೀಲರು ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ. ಸೋಮವಾರ ಮರು ಅಧಿಸೂಚನೆಯ ಘೋಷಣೆ ಹೊರಬೀಳದೇ ಇದ್ದಲ್ಲಿ ನಮ್ಮ ಹೋರಾಟ ತೀವ್ರಗೊಳಿಸೋಣ. ಸೋಮವಾರದಿಂದ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ಪ್ರಮುಖ ಸಾಹಿತಿಗಳು, ಸಂಘ‌ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಅನ್ಯಾಯಕ್ಕೆ ಒಳಗಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸ್ವಾತಂತ್ರ್ಯ ‌ಉದ್ಯಾನವನದಲ್ಲಿ ನಮ್ಮನ್ನು ಕೂಡಿಕೊಳ್ಳಲು ಮನವಿ ಮಾಡುತ್ತೇನೆ. ಆಹೋರಾತ್ರಿ ಚಳವಳಿಯಾದ್ದರಿಂದ ನಿಮಗೆ ಸಣ್ಣಪುಟ್ಟ ಅನಾನುಕೂಲವಾಗಬಹುದು. ಆದರೆ ಚಳವಳಿಯಲ್ಲಿ ಇದೆಲ್ಲ ಸಾಮಾನ್ಯ. ಛಲ ಬಿಡದೇ ಹೋರಾಡೋಣ, ಎಲ್ಲರೂ ಬನ್ನಿ. #KPSCMosa #KPSCDroha #KPSC Siddaramaiah DK Shivakumar HK Patil M B Patil R. Ashoka

ನಾರಾಯಣಗೌಡ್ರು.ಟಿ.ಎ | ‌Narayanagowdru T.A.

12,741 Aufrufe • vor 1 Jahr

Keine weiteren Inhalte verfügbar