正在加载视频...

视频加载失败

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಂದರ್ಭ

16,829 次观看 • 21 天前 •via X (Twitter)

0 条评论

暂无评论

原始帖子的评论将显示在这里

相关视频

ಬಸರೂರು ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ವರಾಹಿ ನದಿಯ ದಡದಲ್ಲಿದ್ದ ಈ ಬಂದರು, ಕರಾವಳಿ ಮತ್ತು ಒಳನಾಡಿನ ವ್ಯಾಪಾರಕ್ಕೆ ಅನುಕೂಲಕರವಾಗಿತ್ತು. 16-ನೇ ಶತಮಾನದಲ್ಲಿ ಕೆಳದಿಯ ಸಾಮಂತರ ಅಧೀನದಲ್ಲಿದ್ದ ಬಸ್ರೂರು ಬಂದರು ಪೋರ್ಚುಗೀಸರ ವಶವಾಗುತ್ತದೆ.ಇದರಿಂದ ಆತಂಕಗೊಂಡ ಕೆಳದಿಯ ಅರಸರು ಛತ್ರಪತಿ ಶಿವಾಜಿ ಮಹಾರಾಜರ ಸಹಾಯ ಕೇಳುತ್ತಾರೆ. ಫೆಬ್ರವರಿ 13, 1665-ರಂದು ಛತ್ರಪತಿ ಶಿವಾಜಿ ಮಹಾರಾಜರು 50 ಯುದ್ಧನೌಕೆಗಳು ಮತ್ತು 4,000 ಸೈನಿಕರೊಂದಿಗೆ ಪೋರ್ಚುಗೀಸ್ ನಿಯಂತ್ರಿತ ಬಸ್ರೂರು ಬಂದರಿನ ಮೇಲೆ ದಾಳಿ ನಡೆಸಿ, ಅದನ್ನು ಮುಕ್ತಗೊಳಿಸಿದರು. ಪರಮ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಶೌರ್ಯ, ಉತ್ಕಟ ದೇಶಾಭಿಮಾನದಿಂದ ಬಸ್ರೂರು ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತವಾಯಿತು. 13 ಫೆಬ್ರವರಿ 1665 ರಂದು ಶಿವಾಜಿ ಮಹಾರಾಜರ ನೇತೃತ್ವದ ನೌಕಾ ಅಭಿಯಾನದಿಂದ ಪೋರ್ಚುಗೀಸರ ವಿರುದ್ಧ ಸಾಧಿಸಿದ ವಿಜಯ ಗಾಥೆಯ ಅಂಗವಾಗಿ ಬಸ್ರೂರಿನಲ್ಲಿ ಪ್ರತಿ ವರ್ಷ 13 ಫೆಬ್ರವರಿ ಯಂದು ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಪ್ರ-ಪ್ರಥಮ ನೌಕಾ ಅಭಿಯಾನವನ್ನು ಕೈಗೊಂಡು ಬಲಿಷ್ಠ ಪೋರ್ಚುಗೀಸರಿಗೆ ಮಣ್ಣು ಮುಕ್ಕಿಸಿದ ಶ್ರೇಯ, ಕೀರ್ತಿ ಅಪ್ರತಿಮ ಸಾಮ್ರಾಟ, ನೌಕಾ ಸೇನೆಯ ಪಿತಾಮಹ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಬಸ್ರೂರ ಗ್ರಾಮದಲ್ಲಿ ಛತ್ರಪತಿ ಶ್ರೀ ಶಿವಾಜಿ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿರುವ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವದಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ 🚩🚩

Basanagouda R Patil (Yatnal)

15,564 次观看 • 5 个月前