
Basanagouda R Patil (Yatnal)
@BasanagoudaBJP • 63,752 subscribers
Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]
Shorts
Videos

ಬಿಡದಿಯಲ್ಲಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನದ ಕುರಿತು ಸರ್ವೇ ಮಾಡಲು ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗರದುಕೊಂಡು ತಮ್ಮ ಜಮೀನಿಗೆ ಕಾಲಿಡಬಾರದೆಂದು ಓಡಿಸಿದ್ದಾರೆ.ಜಿಲ್ಲಾಧಿಕಾರಿಗಳ ಅನುಮತಿ ಪತ್ರ ಇದ್ದರಷ್ಟೇ ಜಮೀನಿಗೆ ಕಾಲಿಡಬೇಕೆಂದು ಎಚ್ಚರಿಸದ್ದಾರೆ. ರೈತರ ವಿರೋಧದ ನಡುವೆಯೂ ಅಂತಿಮ ಅಧಿಸೂಚನೆ ಹೊರಡಿಸರುವುದು ಸರ್ಕಾರ ರಿಯಲ್ ಎಸ್ಟೇಟ್ ಮಾಫಿಯಾ ಗೆ ತಲೆ ಬಾಗಿದಂತಾಗಿದೆ.
Basanagouda R Patil (Yatnal)45,670 görüntüleme • 2 ay önce

➜19,020 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಂದೇ ಖಾತೆಗೆ ಹಣಸಂದಾಯ ➜ಒಂದೇ ಬ್ಯಾಂಕ್ ಖಾತೆಗೆ ತಿಂಗಳಿಗೆ 3.8 ಕೋಟಿ ಗೃಹಲಕ್ಷ್ಮಿ ಹಣ ಜಮಾ ಆಗಿದೆ ➜2024-25 CAG ವರದಿಯಲ್ಲಿ ಗೃಹಲಕ್ಷ್ಮಿ ಲೋಪವನ್ನು ಬಹಿರಂಗಗೊಳಿಸಿದೆ ➜1 ವರ್ಷದಲ್ಲಿ 19,020 ಫಲಾನುಭವಿಗಳ ಒಂದೇ ಖಾತೆಗೆ 45 ಕೋಟಿ ದುಡ್ಡು ➜ಒಂದೇ ಬ್ಯಾಂಕ್ ಖಾತೆಯಲ್ಲಿ ಸಾವಿರಾರು ಫಲಾನುಭವಿಗಳ ಹೆಸರು ಲಿಂಕ್ ➜23,262 ಮಹಿಳೆಯರ ಬ್ಯಾಂಕ್ ಖಾತೆ ಇಲ್ಲದಿದ್ದರೂ ಗೃಹಲಕ್ಷ್ಮಿ ಹಣ ಸಂದಾಯ ➜ಬ್ಯಾಂಕ್ ಖಾತೆ ಇಲ್ಲದ ಫಲಾನುಭವಿಗಳ ದುಡ್ಡು ಯಾರದ್ದೋ ಖಾತೆಗೆ ಜಮಾ ➜8,895 ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಹಣ ಜಮೆ ➜ಕೆಲವು ನಿರ್ದಿಷ್ಟ ಖಾತೆಗಳಿಗೆ 1.8 ಕೋಟಿಯಷ್ಟು ಹಣ ಪದೇ ಪದೇ ಪಾವತಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಲ್ಲಿ ಆಗಿರುವ ಲೋಪಗಳು ಅತ್ಯಂತ ಗಂಭೀರವಾದದ್ದು. ಇದರ ಉಸ್ತುವಾರಿ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಶ್ರೀಮತಿ Laxmi Hebbalkar ಅವರು ಕೂಡಲೇ ರಾಜೀನಾಮೆ ನೀಡಬೇಕು. ವಾಲ್ಮೀಕಿ ನಿಗಮ ಹಗರಣದಂತೆ ಈ ಹಗರಣವನ್ನೂ ಸಹ ಕೇಂದ್ರ ತನಿಖಾ ದಳ (CBI) ತನಿಖೆ ಮಾಡಬೇಕು. ತೆರಿಗೆದಾರರ ಹಣವನ್ನು ಬೇರೆ ಯಾವುದೋ ಖಾತೆಗಳಿಗೆ ಹಾಕಿಕೊಂಡು ಭ್ರಷ್ಟಾಚಾರವೆಸಗುತ್ತಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಫಲಾನುಭವಿಗಳಲ್ಲದ ಖಾತೆಗಳಿಗೆ ಹೋಗಿರುವ ಹಣವನ್ನು ಕೂಡಲೇ ವಾಪಾಸ್ ಪಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. CM of Karnataka I TV9 Kannada I
Basanagouda R Patil (Yatnal)38,036 görüntüleme • 3 ay önce

My views are exactly what our National President Shri Jagat Prakash Nadda Ji has expressed.
Basanagouda R Patil (Yatnal)208,162 görüntüleme • 2 yıl önce

ಇಂದು ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಸಾಲು ಸಾಲು ದೋಷಗಳು ಕಂಡು ಬಂದಿವೆ. OMR sheet ಹಾಗೂ ಪ್ರಶ್ನೆ ಪತ್ರಿಕೆ mismatch ಆಗಿದೆ ಎಂದು ಪರೀಕ್ಷಾರ್ಥಿಗಳು ದೂರಿದ್ದಾರೆ. ಇನ್ನು ಕೆಲವೆಡೆ ಪ್ರಶ್ನೆ ಪತ್ರಿಕೆಯನ್ನು ಅರ್ಧ ಗಂಟೆ ತಡವಾಗಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಒಂದೇ ಪರೀಕ್ಷಾ ಕೇಂದ್ರದಲ್ಲಿ ಒಂದು ಬ್ಲಾಕಿನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಮತ್ತು OMR ಕೊಟ್ಟಿದ್ದಾರೆ ಆದರೆ ಮತ್ತೊಂದು ಬ್ಲಾಕಿನಲ್ಲಿ ಕೊಟ್ಟಿಲ್ಲ. ವಿಜಯಪುರ ಜಿಲ್ಲೆಯ ತಿಕೋಟಾ ಹಾಗೂ ಹಾಸನ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಲೋಪಗಳು ನಡೆದಿವೆ ಎಂದು ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯವಹಾರವಾಗಿದೆ. ಸಕಾಲದಲ್ಲಿ ಪ್ರಶ್ನೆ ಪತ್ರಿಕೆ ಕೊಡದೆ ಇರುವುದು ಪರೀಕ್ಷಾ ಸಕ್ಷಮ ಪ್ರಾಧಿಕಾರ, ಜಿಲ್ಲಾಡಳಿತಗಳ ವೈಫಲ್ಯತೆಯನ್ನು ತೋರಿಸುತ್ತದೆ. ಹಲವು ವರ್ಷಗಳಿಂದ ಪರೀಕ್ಷೆಯನ್ನು ಎದುರಿಸಲು ಕಾಯುತ್ತಿದ್ದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದು ದೊಡ್ಡ ನಿರಾಸೆಯಾಗಿದೆ. ಮುಖ್ಯ ಮಂತ್ರಿಗಳು ಕೂಡಲೇ ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು, ಪ್ರಶ್ನೆ ಪತ್ರಿಕೆ ಸಕಾಲದಲ್ಲಿ ಪೂರೈಕೆ ಮಾಡಲು ವಿಫಲರಾದವರ ಮೇಲೆ ಉಗ್ರ ಕ್ರಮ ಕೈಗೊಂಡು ಈ ರೀತಿಯಾದ ತಪ್ಪುಗಳು, ಲೋಪಗಳು ಪುನರಾವರ್ತನೆಯಾಗದಂತೆ, logistics failure ಆಗದಂತೆ ಎಚ್ಚರವಹಿಸಲಿ. ಲೋ(ಪ)ಕ ಆಯೋಗದಲ್ಲಿ ಆಗುತ್ತಿರುವ ಹಗರಣಗಳು ಒಂದಾದರೆ ಮತ್ತೊಂದು ಕಡೆ ಈ ರೀತಿಯಾದ ವೈಫಲ್ಯದಿಂದ ಯುವ ಜನತೆ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ನೇಮಕಾತಿಯಲ್ಲಿ ಹಾಗೂ ನೇಮಕಾತಿ ನಡೆಸುವ ಪ್ರಾಧಿಕಾರಗಳಿಗೆ ಸರ್ಜರಿ ಮಾಡದಿದ್ದರೆ ಯುವ ಸಮೂಹ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ನಿಶ್ಚಿತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA I CM of Karnataka I AKSSA OFFICIAL I Kanthakumar R / ಕಾಂತಕುಮಾರ್ ಆರ್ I TV9 Kannada I Vistara News I #PoliceConstableExam
Basanagouda R Patil (Yatnal)12,522 görüntüleme • 1 ay önce

ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಲ್ಲಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು, ವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಈ ಹಿಂದಿನ ಅಧ್ಯಕ್ಷರಾಗಿದ್ದ ಶಿವಶಂಕರಪ್ಪನವರು ನಡೆಸಿರುವ ಅಕ್ರಮ, ಭ್ರಷ್ಟಾಚಾರ, cash-for-job ಅನ್ನು ಬುಡದಿಂದ ತೆಗೆದುಹಾಕಲು ಮೊದಲನೇ ಹೆಜ್ಜೆಯಾಗಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ [KPSC] ಎಲ್ಲ ಸದಸ್ಯರನ್ನು, ಸಿಬ್ಬಂದಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಕಡ್ಡಾಯವಾಗಿ ರಜೆ ಅಥವಾ ವರ್ಗಾವಣೆ ಮಾಡಬೇಕೆಂದು ಮುಖ್ಯ ಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ. AKSSA OFFICIAL I Kanthakumar R / ಕಾಂತಕುಮಾರ್ ಆರ್ I Prajavani I Udayavani I CM of Karnataka I
Basanagouda R Patil (Yatnal)10,419 görüntüleme • 2 ay önce

ಅಂತರರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಯಾವುದೇ ವ್ಯತ್ಯಯವಿಲ್ಲದಿದ್ದರೂ ಏಕಾಕೀಯಾಗಿ ಪೆಟ್ರೋಲ್ ಬೆಲೆ ಪ್ರತಿ ಲೀ. ಗೆ ₹3/- ಹಾಗೂ ಡಿಸೇಲ್ ಬೆಲೆ ಪ್ರತಿ ಲೀ.ಗೆ ₹3.50/- ಯಂತೆ ಏಕಾಏಕಿಯಾಗಿ ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಜನವಿರೋಧಿಯಾಗಿದೆ. ಇದರಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಭಾರಿ ತೊಂದರೆಯಾಗಲಿದೆ. ತಾವು ಘೋಷಣೆ ಮಾಡಿರುವ 62,000 ಸಾವಿರ ಕೋಟಿ ರೂ (ರಾಜ್ಯ ಸರ್ಕಾರದ 20 % ಬಜೆಟ್ ನಷ್ಟು) ಬಿಟ್ಟಿ ಭಾಗ್ಯಗಳನ್ನು ಕೊಡಲು ಖಜಾನೆಯಲ್ಲಿ ಹಣವಿಲ್ಲದ ಕಾರಣ ಪೆಟ್ರೋಲ್ ಮೇಲಿನ ಸೇಲ್ಸ್ ಟಾಕ್ಸ್ ಅನ್ನು 3.92% ಹಾಗೂ ಡೀಸೆಲ್ ಮೇಲಿನ ಸೇಲ್ಸ್ ಟಾಕ್ಸ್ ಅನ್ನು 4.1% ರಷ್ಟು ಹೆಚ್ಚಿಸಿದೆ. ಈ ಕೂಡಲೇ ಹೆಚ್ಚಳ ಮಾಡಿರುವ ಕ್ರಮವನ್ನು ಹಿಂಪಡೆಯಬೇಕು. ಆರ್ಥಿಕ ಸುಧಾರಣೆಗಳ ಹರಿಕಾರರೆಂದು ಹಾಗೂ ಅತಿ ಹೆಚ್ಚು ಬಜೆಟ್ ಕೊಟ್ಟ ಮುಖ್ಯ ಮಂತ್ರಿಗಳು ಎಂದು ಬೀಗುವ ಮುಖ್ಯ ಮಂತ್ರಿಗಳು ದಿನಬಳಕೆ ವಸ್ತುವಾದ ಪೆಟ್ರೋಲ್/ಡೀಸೆಲ್ ದರ ಹೆಚ್ಚಳ ಮಾಡಿರುವುದು ಸಾಮಾನ್ಯ ಜನರಿಗೆ ಸಾಕಷ್ಟು ಸಮಸ್ಯೆಯಾಗಲಿದೆ.
Basanagouda R Patil (Yatnal)53,078 görüntüleme • 2 yıl önce

ಪೂರ್ವ ತಯಾರಿಯಿಲ್ಲದೆ ಯೋಜನೆಗಳನ್ನು ಜಾರಿ ಮಾಡಿ ರಾಜ್ಯದ ಜನರನ್ನು ಹಾಗು ವ್ಯವಸ್ಥೆಯನ್ನು ಈ ಸ್ಥಿತಿಗೆ ತಂದಿರುವ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಬಸ್ಸುಗಳ ಸಂಖ್ಯೆಯು ಕಡಿಮೆ ಮಾಡಿದ್ದೀರಿ, ಶಾಲಾ ಮಕ್ಕಳ ಪರದಾಟ, ಬಸ್ಸುಗಳಲ್ಲಿ ಸಾರ್ವಜನಿಕರ ಮೇಲೆ ಸಿಬ್ಬಂದಿ ಹಲ್ಲೆ, ಸಿಬ್ಬಂದಿಗಳ ಮೇಲೆ ಸಾರ್ವಜನಿಕರ ಹಲ್ಲೆ, ಸುರಕ್ಷತೆಯಿಲ್ಲದ ಪ್ರಯಾಣ, ಇನ್ನು ಏನೇನು ಬಾಕಿ ಇದೆ? Vijay Karnataka
Basanagouda R Patil (Yatnal)67,061 görüntüleme • 3 yıl önce

ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ಕಳೆದ 450 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಿರ್ಧಾರ ವಿವೇಚನಾರಹಿತವಾದದ್ದು. ಸರ್ಕಾರ ರಿಯಲ್ ಎಸ್ಟೇಟ್ ಲಾಬಿಗೆ ಶರಣಾಗಿದೆ. ಬಿಡದಿಯ ಮಣ್ಣಿನ ಗುಣ ವಿಶಿಷ್ಟವಾಗಿದೆ. ಇಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬಹುದು (multi cropping). ಬಿಡದಿಯಿಂದ ನಿತ್ಯ 6 ಲಕ್ಷ ಲೀಟರ್ ಹಾಲು ಬೆಂಗಳೂರಿಗೆ ಸರಬರಾಜು ಆಗುತ್ತದೆ. 2 ಲಕ್ಷ ತೆಂಗಿನ ಮರಗಳಿವೆ. ಬಿಡದಿಯಲ್ಲಿ ಯಾರೂ ರೈತರೇ ಇಲ್ಲ, ನಾವು ಟೌನ್ ಶಿಪ್ ಮಾಡುತ್ತೇವೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ಹುರುಳಿಲ್ಲ. ಫಲವತ್ತಾದ ಭೂಮಿ ಸರ್ಕಾರದ ಕೈ ವಶವಾಗಲು ಬಿಡುವುದಿಲ್ಲ. ಹೋರಾಟ ನಿಶ್ಚಿತ. ಬಿಡದಿಯ ರೈತರೊಂದಿಗೆ ನಾನು ಇದ್ದೇನೆ. #BidadiTownshipBeda I #CongressFailsKarnataka I #GBIT
Basanagouda R Patil (Yatnal)11,350 görüntüleme • 3 ay önce

ಭವ್ಯ ಹಿಂದೂ ಸಮಾಗಮ ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ ಧನ್ಯೋಸ್ಮಿ ವಿಡಿಯೋ ಕೃಪೆ: Vishwavani
Basanagouda R Patil (Yatnal)26,842 görüntüleme • 1 yıl önce

ಕಾರ್ಯಕರ್ತನಾದ ಶ್ರೀ ವೇಣುಗೋಪಾಲ್ ರವರ ಹತ್ಯೆ ಹಾಗು ಪೂಜ್ಯ ಜೈನ ಮುನಿಗಳ ಹತ್ಯೆಯ ಬಗ್ಗೆ ಸದನದಲ್ಲಿ ಮಾತಾಡಿದೆನು.
Basanagouda R Patil (Yatnal)53,234 görüntüleme • 3 yıl önce

ರಜತ್ ಶರ್ಮ: ಕಾಂಗ್ರೆಸ್ ನಾಯಕರಾದ ಶ್ರೀ ಮಣಿ ಶಂಕರ್ ಐಯ್ಯರ್ ಅವರು ಭಾರತ ಪಾಕಿಸ್ತಾನದ ಬಗ್ಗೆ ಎಚ್ಚರವಾಗಿರಬೇಕು, ಯಾಕೆ ಅಂದರೆ ಅವರ ಬಳಿ ಅಣು ಬಾಂಬ್ ಇದೆ ಅಂತ ಹೇಳಿಕೆ ನೀಡಿದ್ದಾರೆ.. ಯೋಗಿ ಆದಿತ್ಯನಾಥ್ ಜಿ: ಭಾರತದಲ್ಲಿರುವ ಅಣು ಬಾಂಬ್ ಗಳು ಫ್ರಿಡ್ಜ್ ನಲ್ಲಿ ಇಡೋದಕ್ಕೆ ಇಟ್ಟುಕೊಂಡಿದ್ದೀವಾ ?? ಕಾಂಗ್ರೆಸ್ ಪಕ್ಷಕ್ಕೂ, ಬಿಜೆಪಿ ಗೂ ಇದೆ ವ್ಯತ್ಯಾಸ..
Basanagouda R Patil (Yatnal)42,556 görüntüleme • 2 yıl önce

ಬಸರೂರು ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ವರಾಹಿ ನದಿಯ ದಡದಲ್ಲಿದ್ದ ಈ ಬಂದರು, ಕರಾವಳಿ ಮತ್ತು ಒಳನಾಡಿನ ವ್ಯಾಪಾರಕ್ಕೆ ಅನುಕೂಲಕರವಾಗಿತ್ತು. 16-ನೇ ಶತಮಾನದಲ್ಲಿ ಕೆಳದಿಯ ಸಾಮಂತರ ಅಧೀನದಲ್ಲಿದ್ದ ಬಸ್ರೂರು ಬಂದರು ಪೋರ್ಚುಗೀಸರ ವಶವಾಗುತ್ತದೆ.ಇದರಿಂದ ಆತಂಕಗೊಂಡ ಕೆಳದಿಯ ಅರಸರು ಛತ್ರಪತಿ ಶಿವಾಜಿ ಮಹಾರಾಜರ ಸಹಾಯ ಕೇಳುತ್ತಾರೆ. ಫೆಬ್ರವರಿ 13, 1665-ರಂದು ಛತ್ರಪತಿ ಶಿವಾಜಿ ಮಹಾರಾಜರು 50 ಯುದ್ಧನೌಕೆಗಳು ಮತ್ತು 4,000 ಸೈನಿಕರೊಂದಿಗೆ ಪೋರ್ಚುಗೀಸ್ ನಿಯಂತ್ರಿತ ಬಸ್ರೂರು ಬಂದರಿನ ಮೇಲೆ ದಾಳಿ ನಡೆಸಿ, ಅದನ್ನು ಮುಕ್ತಗೊಳಿಸಿದರು. ಪರಮ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಶೌರ್ಯ, ಉತ್ಕಟ ದೇಶಾಭಿಮಾನದಿಂದ ಬಸ್ರೂರು ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತವಾಯಿತು. 13 ಫೆಬ್ರವರಿ 1665 ರಂದು ಶಿವಾಜಿ ಮಹಾರಾಜರ ನೇತೃತ್ವದ ನೌಕಾ ಅಭಿಯಾನದಿಂದ ಪೋರ್ಚುಗೀಸರ ವಿರುದ್ಧ ಸಾಧಿಸಿದ ವಿಜಯ ಗಾಥೆಯ ಅಂಗವಾಗಿ ಬಸ್ರೂರಿನಲ್ಲಿ ಪ್ರತಿ ವರ್ಷ 13 ಫೆಬ್ರವರಿ ಯಂದು ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಪ್ರ-ಪ್ರಥಮ ನೌಕಾ ಅಭಿಯಾನವನ್ನು ಕೈಗೊಂಡು ಬಲಿಷ್ಠ ಪೋರ್ಚುಗೀಸರಿಗೆ ಮಣ್ಣು ಮುಕ್ಕಿಸಿದ ಶ್ರೇಯ, ಕೀರ್ತಿ ಅಪ್ರತಿಮ ಸಾಮ್ರಾಟ, ನೌಕಾ ಸೇನೆಯ ಪಿತಾಮಹ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಬಸ್ರೂರ ಗ್ರಾಮದಲ್ಲಿ ಛತ್ರಪತಿ ಶ್ರೀ ಶಿವಾಜಿ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿರುವ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವದಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ 🚩🚩
Basanagouda R Patil (Yatnal)15,615 görüntüleme • 7 ay önce