
Dhananjaya
@Dhananjayaka • 405,674 subscribers
Actor
Shorts
Videos

Mother Promise, ತುಂಬಾ ಜನಕ್ಕೆ ಸಿನಿಮಾ ಇಷ್ಟ ಆಗ್ತಿದೆ, Theater ಅಲ್ಲಿ ಮಜ ಮಾಡ್ತಾ ಇದಾರೆ. ಕೆಲವೊಬ್ರಿಗೆ ಇಷ್ಟ ಆಗದೆ ಕೂಡ ಇರಬಹುದು, ಅದನ್ನ ಹೇಳಿದ್ರೂ appreciate ಮಾಡನ, critics are always welcome. ಆದ್ರೆ ಬೇಕು ಅಂತ ಚೆನ್ನಾಗಿ ಆಗ್ತಿರೋ ಸಿನಿಮಾನ ಸಾಯಿಸೋಕೆ, ಒಂದು hatred campaign run ಮಾಡೋದು , ಚಿತ್ರರಂಗಕ್ಕೆ ಒಳ್ಳೇದಲ್ಲ. ಇದು ಚೆನ್ನಾಗಿ ಆಗ್ತಿರೋ ಎಲ್ಲ ಸಿನಿಮಾಗಳಿಗೂ ಆಗ್ತಾ ಇದೆ. ಅದಿಕ್ಕೆ ಎಲ್ಲ ನಿರ್ಮಾಪಕರು court ಇಂದ order ತಂದು ratings ನ disable ಮಾಡ್ತಾರೆ. ಅದರಿಂದ ಪ್ರಾಮಾಣಿಕ ವಿಮರ್ಶೆಗಳಿಗೂ ತಡೆಯೊಡ್ಡಿದಂಗೆ ಆಗತ್ತೆ. ಒಂದು healthy environment create ಆಗಬೇಕು. ಈ ಕೆಟ್ಟ culture end ಆಗಬೇಕು.
Dhananjaya287,368 views • 2 months ago

ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು ನಾನು ಧನ್ಯ ❤️ ಇಂತಿ ನಿಮ್ಮವ ಧನಂಜಯ
Dhananjaya194,612 views • 1 year ago

ಚೆಂದದ ಚಿಟ್ಟೆಯ ನನ್ನನಾಗಿಸು ಬಗೇ ಬಗೇ ಹೂವ ತೋರಿಸು ಮುಗಿಲಿನ ಅಂಚಿನ ಹಕ್ಕಿಯಾಗಿಸು ಪದೇ ಪದೇ ನನ್ನ ಹಾರಿಸು ಓ ಬೆಳಕೆ ಬಾ ಮನಕೆ ತುಂಬಿಕೊಳ್ಳುವೆ ದ್ವೇಷವಳಿಯಲಿ ಸ್ನೇಹವರಳಲಿ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮಕ್ಕಳು ಹಾಗೂ ಸಿದ್ದಗಂಗಾ ಸಿಬ್ಬಂದಿ ವರ್ಗಕ್ಕೆ ಹೃದಯಪೂರ್ವಕ ಧನ್ಯವಾದಗಳು ❤️ #MotherPromise from July 10th❤️
Dhananjaya32,252 views • 2 months ago

ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ❤️ ನಾಳೆಯಿಂದ ರಾಜ್ಯಾದ್ಯಂತ 'ಮದರ್ ಪ್ರಾಮಿಸ್' #motherpromise
Dhananjaya25,204 views • 2 months ago

ನಿರಂತರ ಹೊಸ ಹರಿವಿನೊಂದಿಗೆ ಪ್ರಯಾಣದ ತುಡಿತ. ಪ್ರೀತಿಯಿರಲಿ ❤️ #MotherPromise from July 10th.
Dhananjaya15,447 views • 2 months ago

“ಟಗರುಪಲ್ಯ” ಚಿತ್ರೀಕರಣ ಮುಕ್ತಾಯ. ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ. ಕನ್ನಡಕ್ಕೊಬ್ಬ ಹೊಸ ಪ್ರತಿಭಾನ್ವಿತ ನಿರ್ದೇಶಕ, ನಾಯಕನಾಗಿ ನಾಗಭೂಷಣ, ನಾಯಕಿಯಾಗಿ ಅಮೃತಾ ಪ್ರೇಮ್ ಮತ್ತು ಹೊಸ ಪ್ರತಿಭಾನ್ವಿತರ ದಂಡು, ಜೊತೆಗೆ ರಂಗಾಯಣ ರಘು ಸರ್ , ತಾರಮ್ಮ, ಬಿರಾದರ್ ಅವರಂತಹ ಮೇರು ಕಲಾವಿದರ ಹೆಗಲು. ಸದ್ಯದಲ್ಲೆ ನಿಮ್ಮ ಮುಂದೆ❤️
Dhananjaya111,856 views • 3 years ago

Zee5 ಕನ್ನಡ ಸಹಯೋಗದಲ್ಲಿ ನನ್ನ ನಿರ್ಮಾಣದ, ಪ್ರತಿಭಾವಂತ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದ, ನಾಗಭೂಷಣ, ಪಾಯಲ್, ಶ್ರೀವತ್ಸ, ಸುಧಾಕರ್ ಗೌಡ ಮೊದಲಾದ ಪ್ರತಿಭಾವಂತ ಕಲಾವಿದರು ನಟಿಸಿರುವ “ಜೆರಾಕ್ಸ್” trailer ಇಲ್ಲಿದೆ. ಸದ್ಯದಲ್ಲೇ 6 ಕಂತುಗಳ ಈ ವೆಬ್ ಸರಣಿ Zee5 ನಲ್ಲಿ ಅನಾವರಣಗೊಳ್ಳಲಿದೆ. ಪ್ರೀತಿಯಿರಲಿ. ನಕಲಿ ಮಾನವರಿದ್ದಾರೆ, ಎಚ್ಚರಿಕೆ!!! #Jerax Zee 5 Kannada Daali Pictures Nagabhushana N S | ನಾಗಭೂಷಣ Srinidhi Bengaluru। ಶ್ರೀನಿಧಿ ಬೆಂಗಳೂರು Payal Chengappa
Dhananjaya22,082 views • 5 months ago

“ಡಾಲಿ ಪಿಕ್ಚರ್ಸ್” ನಿಂದ ಕನ್ನಡಕ್ಕೆ ಮತ್ತೊಂದು ಕಾಣಿಕೆ “ವಿದ್ಯಾಪತಿ”, April 10 ರಿಂದ ನಿಮ್ಮ ಮುಂದೆ. ಈ ಬಾರಿಯು ಕೂಡ ಕುಟುಂಬ ಸಮೇತರಾಗಿ ಮಕ್ಕಳಾದಿಯಾಗಿ enjoy ಮಾಡುವ ಸಿನಿಮಾ. ಚಿತ್ರಮಂದಿರಕ್ಕೆ ಬಂದು ಆಶೀರ್ವದಿಸಿ. ಒಳ್ಳೆಯ ಪ್ರಯತ್ನಗಳಿಗೆ ಸಾಕ್ಷಿಯಾಗಿ, ಮತ್ತೊಂದಿಷ್ಟು ಕನಸುಗಳಿಗೆ ಸ್ಫೂರ್ತಿಯಾಗಿ. ಪ್ರೀತಿಯಿರಲಿ ❤️
Dhananjaya42,227 views • 1 year ago